ಜಮ್ಮು: ಜೂ.15 ರಂದು 3,300 ಜನಗಳ ಮೊತ್ತೊಂದು ಯಾತ್ರಾರ್ಥಿಗಳ ತಂಡ ಅಮರನಾಥ ಯಾತ್ರೆಗೆ ತೆರಳಿದೆ.
ಬೆಳಿಗ್ಗೆ ಸುಮಾರು 3:30 ಕ್ಕೆ 132 ಭದ್ರತಾ ಪಡೆಗಳ ವಾಹನಗಳೊಂದಿಗೆ 3,398 ಯಾತ್ರಾರ್ಥಿಗಳು ಅಮರನಾಥ ಯಾತ್ರೆಗೆ ತಲುಪಿದ್ದು, 16 ನೇ ದಿನದ ಯಾತ್ರೆಯಲ್ಲಿ 10,000 ಯಾತ್ರಾರ್ಥಿಗಳು ಅಮರನಾಥದ ಹಿಮ ಗುಹೆಯಲ್ಲಿನ ಶಿವಲಿಂಗವನ್ನು ದರ್ಶನ ಮಾಡಿದ್ದಾರೆ.
ಜೂ.29 ರಂದು ಪ್ರಾರಂಭವಾದ ಅಮರನಾಥ ಯಾತ್ರೆಗೆ ಈ ವರೆಗೂ 2 ಲಕ್ಷ ಯಾತ್ರಾರ್ಥಿಗಳು ತೆರಳಿದ್ದಾರೆ. ಜು.10 ರಂದು ನಡೆದ ಭಯೋತ್ಪಾದಕ ದಾಳಿಯ ಹೊರತಾಗಿಯೂ ಅಮರನಾಥ ಯಾತ್ರೆ ಮುಂದುವರೆದಿದ್ದು, ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.