ಸಂಗ್ರಹ ಚಿತ್ರ 
ದೇಶ

ಹಸು ಕೊಂದವನಿಗೆ 14 ವರ್ಷ ಜೈಲು, ಕಾರು ಚಲಾಯಿಸಿ ಮನುಷ್ಯರ ಕೊಂದವನಿಗೆ 2 ವರ್ಷ ಜೈಲು?: ದೆಹಲಿ ಕೋರ್ಟ್ ಪ್ರಶ್ನೆ

ಹಸು ಕೊಂದವನಿಗೆ 14 ವರ್ಷ ಜೈಲು ಶಿಕ್ಷೆ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಮನುಷ್ಯರ ಕೊಂದವನಿಗೆ ಕೇವಲ 2 ವರ್ಷ ಜೈಲು ಶಿಕ್ಷೆ.. ಇದ್ಯಾವ ನ್ಯಾಯ..ಹೀಗೆಂದು ಪ್ರಶ್ನಿಸಿದ್ದು ಸಾಮಾನ್ಯ ಪ್ರಜೆಯಲ್ಲ..ಬದಲಿಗೆ ಸ್ವತಃ ನ್ಯಾಯಾದಾನ ಮಾಡುವ ನ್ಯಾಯಮೂರ್ತಿ..

ನವದೆಹಲಿ: ಹಸು ಕೊಂದವನಿಗೆ 14 ವರ್ಷ ಜೈಲು ಶಿಕ್ಷೆ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಮನುಷ್ಯರ ಕೊಂದವನಿಗೆ ಕೇವಲ 2 ವರ್ಷ ಜೈಲು ಶಿಕ್ಷೆ.. ಇದ್ಯಾವ ನ್ಯಾಯ..ಹೀಗೆಂದು ಪ್ರಶ್ನಿಸಿದ್ದು ಸಾಮಾನ್ಯ ಪ್ರಜೆಯಲ್ಲ..ಬದಲಿಗೆ ಸ್ವತಃ  ನ್ಯಾಯಾದಾನ ಮಾಡುವ ನ್ಯಾಯಮೂರ್ತಿ..

ಹೌದು.. ಇಂತಹುದೊಂದು ಪ್ರಶ್ನೆ ಕೇಳಿದ್ದು ದೆಹಲಿ ಕೋರ್ಟ್...ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಗೋ ಮಾಂಸ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಮಾತನಾಡಿದ ದೆಹಲಿ ಕೋರ್ಟ್ ನ್ಯಾಯಮೂರ್ತಿ ಸಂಜೀವ್  ಕುಮಾರ್ ಅವರು, ಹರ್ಯಾಣ ಮೂಲದ ಉದ್ಯಮಿಯೊಬ್ಬರ ಪುತ್ರ 2008ರಲ್ಲಿ ತಮ್ಮ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಬೇಕಾಬಿಟ್ಟಿ ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಎರಡು ವರ್ಷ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯದ ನ್ಯಾಯಾಧೀಶರು ತೀರ್ಪಿನಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ.

ನ್ಯಾಯಾಧೀಶರು ಗಮನಿಸಿದಂತೆ ನಿರ್ಲಕ್ಷ್ಯದಿಂದ ವೇಗವಾಗಿ ಕಾರು ಚಲಾಯಿಸಿಕೊಂದವನಿಗೆ ಗರಿಷ್ಠ 2 ವರ್ಷಗಳ ಜೈಲು ಶಿಕ್ಷೆ ವಿಧಿಸುವ  ಅವಕಾಶವಿದ್ದು, ಅದೇ ಹಸು ಕೊಂದವನಿಗೆ ಗರಿಷ್ಠ 14 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಪರೋಕ್ಷವಾಗಿ ಹಾಲಿ ಕಾನೂನಿನ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಪಿಸಿ ಸೆಕ್ಷನ್ 304ಎ ಪ್ರಕಾರ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಮತ್ತೋರ್ವನ ಸಾವಿಗೆ ಕಾರಣನಾದವನಿಗೆ ಕಾನೂನಿನಲ್ಲಿ ಗರಿಷ್ಠ 2 ವರ್ಷ ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ. ಅದೇ ಹಸು ಕೊಂದವನಿಗೆ ಗರಿಷ್ಠ 14 ವರ್ಷಗಳ  ಶಿಕ್ಷೆ ನೀಡುವ ಅವಕಾಶವಿದೆ ಎಂದು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರು ಹೇಳಿದ್ದಾರೆ.

ಜನರ ಜೀವಕ್ಕೆ ಅಪಾಯ ತರುವ ಇಂಥ ಚಾಲಕರಿಗೆ ವಿಧಿಸುವ ಶಿಕ್ಷೆಗಿಂತ ಕಠಿಣ ಶಿಕ್ಷೆಯನ್ನು ಜಾನುವಾರು ಸಂಬಂಧಿ ಅಪರಾಧಗಳಿಗೆ ವಿಧಿಸುವ ಕಾನೂನು ನಮ್ಮಲ್ಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ ಕಾನೂನು ಬದಲಾವಣೆ ಅಥವಾ ತಿದ್ದುಪಡಿಯಾಗಬೇಕಿದೆ. ಪ್ರಮುಖವಾಗಿ ನಿರ್ಲಕ್ಷ್ಯ ಚಾಲನೆಯಂತಹ  ಗಂಭೀರ ಪ್ರಕರಣಗಳಲ್ಲಿ ತುರ್ತಾಗಿ ಬದಲಾವಣೆಯಾಗಬೇಕಿದೆ ಎಂದು ನ್ಯಾಯಮೂರ್ತಿಗಳು ಒತ್ತಿ ಹೇಳಿದ್ದಾರೆ.

ಎನ್ ಸಿ ಆರ್ ಬಿ (National Crime Records Bureau)ದಿಂದ ಪಡೆಯಲಾಗಿರುವ ದತ್ತಾಂಶಗಳ ಪರಿಶೀಲನೆ ನಡೆಸಿದ ನ್ಯಾಯಾಧೀಶರು, 2015ರಿಂದ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿರುವವರ ಪ್ರಮಾಣದಲ್ಲಿ  ಶೇ,5.1ರಷ್ಟು ಏರಿಕೆಯಾಗಿದ್ದು, 2015ರಲ್ಲಿ ಪ್ರತೀ ಒಂದು ಗಂಟೆಗೆ 53 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಬಹುತೇಕ ರಸ್ತೆ ಅಪಘಾತಗಳು ಅತಿವೇಗದಿಂದ ಸಂಭವಿಸಿದ್ದಾಗಿದ್ದು, ಶೇ.43.7 ರಷ್ಟು ರಸ್ತೆ ಅಪಘಾತಗಳಲ್ಲಿ 60,969  ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 2.12 ಲಕ್ಷ ಮಂದಿ ಗಾಯಗೊಂಡಿದ್ದಾರೆ ಎಂದು ನ್ಯಾಯಾದೀಶರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT