ದೇಶ

ಉತ್ತರಪ್ರದೇಶ ವಿಧಾನಸಭೆಯಲ್ಲಿ ಶಂಕಾಸ್ಪದ ಪುಡಿ ಇದ್ದ ಮತ್ತೊಂದು ಪೊಟ್ಟಣ ಪತ್ತೆ

Manjula VN
ಲಖನೌ: ದೇಶದ ಅತಿದೊಡ್ಡ ವಿಧಾನಸಭೆಯಾಗಿರುವ ಉತ್ತರಪ್ರದೇಶದ ವಿಧಾನಸಭೆಯೊಳಗೆ ಅತ್ಯಂತ ಅಪಾಯಕಾರಿ ಸ್ಫೋಟಕ ಪದಾರ್ಥ 'ಪಿಇಟಿಎನ್' ಪತ್ತೆಯಾದ ಎರಡು ದಿನಗಳ ಬಳಿಕ ಶಂಕಾಸ್ಪದ ಪುಡಿ ತುಂಬಿದ್ದ ಮತ್ತೊಂದು ಪೊಟ್ಟಣ ದೊರೆತಿರುವುದಾಗಿ ಭಾನುವಾರ ತಿಳಿದುಬಂದಿದೆ. 
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಿಬ್ಬಂದಿಗೆ ಶುಕ್ರವಾರ ಸಂಜೆ ಪೊಟ್ಟಣದಲ್ಲಿ ಸುತ್ತಿಡಲಾಗಿದ್ದ ಈ ಶಂಕಾಸ್ಪದ ಪುಡಿ ದೊರೆತಿದೆ ಎಂದು ಹೇಳಲಾಗುತ್ತಿದೆ. 
ಶಂಕಾಸ್ಪದ ಪುಡಿ ಪೊಟ್ಟಣ ದೊರಕುತ್ತಿದ್ದಂತೆಯೇ ಲಖನೌ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ವಿಧಾನಸಬೆಯೊಳಗೆ ಪುಡಿ ಲಭ್ಯವಾಗಿರುವುದನ್ನು ಭಯೋತ್ಪಾದನಾ ನಿಗ್ರಹ ದಳ ಹಾಗೂ ಐಜಿಪಿ ಅಸೀಮ್ ಅರುಣ್ ಅವರು ಖಚಿತಪಡಿಸಿದ್ದಾರೆ. 
ಹೊಸದಾಗಿ ಸಿಕ್ಕಿರುವ ಪೊಟ್ಟಣದಲ್ಲಿ 50ಗ್ರಾಂನಷ್ಟು ಪುಡಿ ಇದೆ. ಅದು ಮೆಗ್ನೀಷಿಯಂ ಸಲ್ಫೇಟ್ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಮತ್ತಷ್ಟು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಗ್ನೀಷಿಯಂ ಸೆಲ್ಫೇಟ್ ಅನ್ನು ಪ್ಯಾಕಿಂಗ್ ಪದಾರ್ಥಗಳನ್ನು ಒಣಗಿಸುವ ವಸ್ತುವಾಗಿ ಬಳಕೆ ಮಾಡಲಾಗಿದೆ. 
SCROLL FOR NEXT