ದೇಶ

ಗೋ ರಕ್ಷಕರಿಂದ ಹಲ್ಲೆಗೀಡಾದ ವ್ಯಕ್ತಿ ಗೋಮಾಂಸ ಕೊಂಡೊಯ್ಯುತ್ತಿದ್ದ: ಖಚಿತಪಡಿಸಿದ ಪೊಲೀಸರು

Sumana Upadhyaya
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನಾಲ್ಕು ದಿನಗಳ ಹಿಂದೆ ಗೋಮಾಂಸ ಹೊತ್ತುಕೊಂಡು ಸಾಗುತ್ತಿದ್ದ ವ್ಯಕ್ತಿಗೆ ಗೋರಕ್ಷಕರು ಥಳಿಸಿದ ವ್ಯಕ್ತಿ ಬಿಜೆಪಿ ಪಕ್ಷದ ಜೊತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ದೃಢಪಡಿಸಿದ್ದಾರೆ. 
ಮೊನ್ನೆ 12ರಂದು ಬಿಜೆಪಿಯ ಕಟೊಯ್ ಘಟಕದ ಸದಸ್ಯರಾಗಿರುವ  ಸಲೀಮ್ ಶಾಹ ಎಂಬಾತನಿಗೆ ಹೊಡೆದು ದೈಹಿಕ ಹಲ್ಲೆ ನಡೆಸಿದ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಲೀಂ ಕೊಂಡೊಯ್ಯುತ್ತಿದ್ದ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಪ್ರಯೋಗಾಲಯದ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಬಂದಿದ್ದು ಅದು ಗೋಮಾಂಸ ಎಂದು ತಿಳಿದುಬಂದಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಸೂಪರಿಂಟೆಂಡೆಂಟ್ ಶೈಲೇಶ್ ಬಾಲ್ಕವೇಡೆ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಕಾನೂನಿಗೆ ತಕ್ಕಂತೆ ಪೊಲೀಸರು ಶಾಹ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.
ಈ ಮಧ್ಯೆ, ನಾಗ್ಪುರ ಗ್ರಾಮಾಂತರ ಬಿಜೆಪಿ ಅಧ್ಯಕ್ಷ, ರಾಜೀವ್ ಪೊಟ್ ದಾರ್  ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.ಶಾಹಾ ಗೋಮಾಂಸ ಕೊಂಡೊಯ್ಯುತ್ತಿದ್ದರು ಎಂಬ ವಿಚಾರ ಆಘಾತವನ್ನುಂಟುಮಾಡಿದೆ. ಅವರನ್ನು ಪಕ್ಷದಿಂದ ವಜಾ ಮಾಡಲಾಗುವುದು ಎಂದು ಹೇಳಿದರು.
ಕಾನೂನು ಪ್ರಕಾರ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಜನರು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಸಮಾಜದಲ್ಲಿ ಹಿಂಸೆ ಸೃಷ್ಟಿಸಬಾರದು ಎಂದು ಪೊಟ್ದಾರ್ ತಿಳಿಸಿದ್ದಾರೆ.
SCROLL FOR NEXT