ಚೀನಾಗೆ ಸವಾಲು ಹಾಕಲು ಭಾರತಕ್ಕೆ ಶಕ್ತಿ ಸಾಮರ್ಥ್ಯದ ಕೊರತೆ: ಫಾರೂಕ್ ಅಬ್ದುಲ್ಲಾ
ಚೀನಾ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತಕ್ಕೆ ಶಕ್ತಿ ಸಾಮರ್ಥ್ಯದ ಕೊರತೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ...
ನವದೆಹಲಿ: ಚೀನಾ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತಕ್ಕೆ ಶಕ್ತಿ ಸಾಮರ್ಥ್ಯದ ಕೊರತೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕಾಶ್ಮೀರದ ಲಡಾಕ್ ನಲ್ಲಿನ ಅಕ್ಸೈ ಚೀನ್ ಅನ್ನು ಚೀನಾ ಆಕ್ರಮಿಸಿಕೊಂಡಿದೆ. ಇದು ನಮಗೆ ಗೊತ್ತು. ಆದರೆ ಆ ಪ್ರದೇಶವನ್ನು ಚೀನಾದಿಂದ ಹಿಂಪಡೆಯಲು ಶಕ್ತಿ ಕೊರತೆ ಇದೆ. ಚೀನಾದ ಸ್ನೇಹ ಸಂಪಾದಿಸುವ ಮೂಲಕ ನಾವು ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಿಕೊಳ್ಳಬಹುದೇ ಹೊರತು ಯುದ್ಧದಿಂದಲ್ಲ ಎಂದು ಫಾರೂಕ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.
ರಾಜತಾಂತ್ರಿಕ ಮಾತುಕತೆ ಮೂಲಕ ಗಡಿ ಸಮಸ್ಯೆ ಪರಿಹಾರಿಕ್ಕೆ ಭಾರತ ಮುಂದಾಗಬೇಕು. ಚೀನಾ ಪಾಕಿಸ್ತಾನದ ಸ್ನೇಹಿ ರಾಷ್ಟ್ರ. ಹೀಗಾಗಿ ನಾವು ಚೀನಾದೊಂದಿಗೆ ಸ್ನೇಹ ಮಾಡಿಕೊಳ್ಳಬೇಕು. ಆಗ ಅವರ ನಡುವಿನ ಸ್ನೇಹ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಮತ್ತೊಂದು ಸಮಸ್ಯೆಯಾಗಿದ್ದು, ಚೀನಾ ದಲೈ ಲಾಮಾ ಅವರನ್ನು ದೇಶದಿಂದ ಹೊರಗೆ ಕಳುಹಿಸುವಂತೆ ಕೇಳುತ್ತಿದೆ. ಆಗೆ ಮಾಡುವುದು ಭಾರತಕ್ಕೆ ಒಲಿತು ಎಂದು ಹೇಳಿದ್ದಾರೆ.