ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗಿ ಇರ್ಫಾನ್ ಪಠಾಣ್ ತಮ್ಮ ಪತ್ನಿಯೊಂದಿಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇಸ್ಲಾಂ ಬಾಹೀರ ಎಂಬ ಟೀಕೆ ಕೇಳಿಬಂದಿದೆ.
ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫ ಬೇಗ್ ಅವರೊಂದಿಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇರ್ಫಾನ್ ಪಠಾಣ್ ಅಪ್ ಡೇಟ್ ಮಾಡಿರುವ ಫೋಟೊ ಇಸ್ಲಾಂ ಗೆ ವಿರುದ್ಧವಾದದ್ದು ಎಂಬ ಆಕ್ಷೇಪ ವ್ಯಕ್ತವಾಗಿದೆ.
ಒಬ್ಬ ಮುಸ್ಲಿಂ ಸಮುದಾಯದವನಾಗಿ ಪತ್ನಿಯ ಮುಖವನ್ನು ಸಮಾಜಕ್ಕೆ ಪ್ರದರ್ಶಿಸುವುದು ಸರಿಯಲ್ಲ. ಈ ರೀತಿಯ ಫೋಟೊ ಹಾಕುವುದನ್ನು ಇಸ್ಲಾಂ ನಲ್ಲಿ ಹರಾಮ್ ಎಂದು ಹೇಳಲಾಗಿದೆ ಎಂದು ಫೇಸ್ ಬುಕ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.