ದೇಶ

ವಿಶ್ವಾಸಮತ ಗೆದ್ದ ಝೀಲಿಯಾಂಗ್, ನಾಗಾಲ್ಯಾಂಡ್ ನೂತನ ಸಿಎಂ ಕುರ್ಚಿ ಭದ್ರ

Lingaraj Badiger
ಕೊಹಿಮಾ: ಎರಡು ದಿನಗಳ ಹಿಂದಷ್ಟೇ ನಾಗಾಲ್ಯಾಂಡ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಟಿ.ಆರ್. ಝೀಲಿಯಾಂಗ್ ಅವರು ಶುಕ್ರವಾರ ವಿಧಾಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಮೂಲಕ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಂಡಿದ್ದಾರೆ.
ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿದ್ದ ಶುರ್ಹೊಜೋಲಿ ಲೀಜೀಟ್ಸು ಅವರು ವಿಶ್ವಾಸಮತಯಾಚಿಸುವಲ್ಲಿ ವಿಫಲರಾದ ಹಿನ್ನಲೆಯಲ್ಲಿ ರಾಜ್ಯಪಾಲ ಪಿ.ಬಿ ಆಚಾರ್ಯ ಅವರು ಲೀಜೀಟ್ಸು ಸರ್ಕಾರವನ್ನು ವಜಾ ಮಾಡಿ, ನೂತನ ಮುಖ್ಯಮಂತ್ರಿಯಾಗಿ ಟಿ ಆರ್‌ ಝೆಲಿಯಾಂಗ್‌ ಅವರನು ನೇಮಿಸಿದ್ದರು. ಅಲ್ಲದೆ ಇಂದು ವಿಧಾಸಭೆಯಲ್ಲಿ  ಬಹುಮತ ಸಾಬೀತು ಪಡಿಸುವಂತೆ ಅವರಿಗೆ ಸೂಚಿಸಿದ್ದರು.
ವಿಶ್ವಾಸ ಮತಯಾಚನೆಗಾಗಿ ಇಂದು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ವಿಶ್ವಾಸ ಮತಯಾಚಿಸಿದ ಸಿಎಂ ಝೆಲಿಯಾಂಗ್‌ ಅವರ ಪರವಾಗಿ 58 ಮತಗಳ ಪೈಕಿ 47 ಮತಗಳು ಬಂದಿವೆ. ನಾಗಾಲ್ಯಾಂಡ್ ವಿಧಾನಸಭೆ 60 ಸದಸ್ಯರ ಬಲ ಹೊಂದಿದ್ದು, ಇತ್ತೀಚಿಗಷ್ಟೇ ಓರ್ವ ಶಾಸಕ ರಾಜಿನಾಮೆ ನೀಡಿದ್ದು, ಇನ್ನು ಸ್ಪೀಕರ್ ಈ ಮತದಲ್ಲಿ ಭಾಗಿಯಾಗುವಂತಿಲ್ಲ.
ನಾಗಾ ಪೀಪಲ್ಸ್ ಫ್ರಂಟ್'ನ 43 ಶಾಸಕರು ಮಾಜಿ ಸಿಎಂ ಟಿ.ಆರ್. ಝೀಲಿಯಾಂಗ್ ನೇತೃತ್ವದಲ್ಲಿ ಸಿಎಂ ಲೀಜೀಟ್ಸು ವಿರುದ್ಧ ಬಂಡಾಯವೆದ್ದ ಹಿನ್ನಲೆಯಲ್ಲಿ ಲೀಜಿಟ್ಸು ಬಹುಮತ ಕಳೆದುಕೊಂಡಿದ್ದರು.
SCROLL FOR NEXT