ಕಾಂಗ್ರೆಸ್ ಧಾರ್ಮಿಕ ಸೆಲ್ ಮುಖಂಡ
ಮುಂಬೈ: ಗೋಮಾಂಸ ತಿನ್ನುವುದರಿಂದ ಯೋಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಎಂದು ಕಾಂಗ್ರೆಸ್ ಧಾರ್ಮಿಕ ಸೆಲ್ ಸಂಚಾಲಕ ಧ್ಯಾನ್ಯೊಗಿ ಓಂದಾಸ್ ಜಿ ಮಹಾರಾಜ್ ಹೇಳಿದ್ದಾರೆ.
ಕಾಂಗ್ರೆಸ್ ರಚನೆ ಮಾಡಿರುವ ಧಾರ್ಮಿಕ ಸೆಲ್ ಸಂಚಾಲಕ ಯೋಗ ಗುರು ಧ್ಯಾನ್ ಯೋಗಿ ಓಂ ದಾಸ್ ಜಿ ಮಹಾರಾಜ್ ಅವರು ಗೋಮಾಂಸ ತಿನ್ನುವುದರಿಂದ ಯೋಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದ್ದು, ಗೋವು ನಮ ತಾಯಿಗೆ ಸಮಾನವಾದದ್ದು, ಗೋಮಾಂಸ ಸೇವನೆ ಮಾಡುವುದರಿಂದ ಖಿನ್ನತೆ ಉಂಟಾಗುತ್ತದೆ. ಆದ್ದರಿಂದ ಗೋಹತ್ಯೆ ನಿಷೇಧವನ್ನು ಬೆಂಬಲಿಸಬೇಕು ಎಂದು ಧ್ಯಾನ್ ಯೋಗಿ ಓಂ ದಾಸ್ ಜಿ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಅವರು, ಸಸ್ಯಾಹಾರದಲ್ಲೇ ಅತ್ಯುತ್ತಮ ಆಹಾರಗಳಿವೆ ಅವುಗಳನ್ನು ಸೇವಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಓಂ ದಾಸ್ ಜಿ ಮಹಾರಾಜ್ ಖಂಡಿಸಿದ್ದು, ಭಾರತದ ಯಾವುದೇ ಸಂತರೂ ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಸಮರ್ಥಿಸುವುದಿಲ್ಲ ಎಂದು ಹೇಳಿದ್ದಾರೆ.