ನಾಸಾ ನಕ್ಷೆಯಲ್ಲಿ ಪ್ರಜ್ವಲಿಸುತ್ತಿರುವ ಭಾರತ; ಕತ್ತಲಲ್ಲಿ ಮುಳುಗಿದ ಚೀನಾ!
ಅಮೆರಿಕ ಬಾಹ್ಯಾಕಾಶ ಸಂಸ್ಥೆ(ನಾಸಾ) ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ಭಾರತ ಪ್ರಜ್ವಲಿಸುತ್ತಿದ್ದರೆ, ಅಂತ ಚೀನಾ ಕತ್ತಲಲ್ಲಿದ್ದಂತೆ ಕಾಣುತ್ತಿದ್ದು ಇದು ಚೀನಾದ...
ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಸ್ಥೆ(ನಾಸಾ) ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ಭಾರತ ಪ್ರಜ್ವಲಿಸುತ್ತಿದ್ದರೆ, ಅಂತ ಚೀನಾ ಕತ್ತಲಲ್ಲಿದ್ದಂತೆ ಕಾಣುತ್ತಿದ್ದು ಇದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ.
ಅರ್ಥ್ಸ್ ಸಿಟಿ ಲೈಟ್ಸ್ ಯೋಜನೆಯ ನಕ್ಷೆಯೊಂದನ್ನು ನಾಸಾ ಬಿಡುಗಡೆ ಮಾಡಿದ್ದು ಈ ನಕ್ಷೆಯು ಇದೀಗ ಚೀನಾದಲ್ಲಿ ಸಂಚಲನ ಮೂಡಿಸಿದೆ. ವಿಶ್ವದಾದ್ಯಂತ ನಗರದ ವಿದ್ಯುದೀಕರಣವನ್ನು ಸೆಟಿಲೈಟ್ ಚಿತ್ರದ ಮೂಲಕ ನಾಸಾ ತೋರಿಸಿದೆ. ಆದರೆ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಚೀನಾ ಮಾತ್ರ ಕತ್ತಲಲ್ಲಿದ್ದಂತೆ ಕಾಣುತ್ತಿದೆ.
ಭಾರತಕ್ಕಿಂತ ಚೀನಾ ದೇಶವು ಹೆಚ್ಚು ವಿದ್ಯುದೀಕರಣಗೊಳಿಸಿರುವುದರಿಂದ ಚೀನಾ ಹೆಚ್ಚು ಹೊಳೆಯಬೇಕಿತ್ತು. ಆದರೆ ಚೀನಾ ದೇಶವು ಭಾರತಕ್ಕಿಂತ ಹೆಚ್ಚು ಗುಡ್ಡಗಾಡು, ಬೆಟ್ಟಗಳನ್ನು ಹೊಂದಿದೆ. ಭಾರತದ ಶೇ. 40ರಷ್ಟು ಭಾಗವು ಬಯಲು ಪ್ರದೇಶವಾಗಿದೆ. ಡೆಕ್ಕನ್ ಪ್ರಸ್ಥಭೂಮಿಯು ಒಂದು ಸಾವಿರ ಮೀಟರ್ ಗಿಂತ ಕಡಿಮೆ ಎತ್ತರದಲ್ಲಿದೆ. ಭಾರತ ಮೂರು ಕಡೆಯಿಂದಲೂ ಸಮುದ್ರದಿಂದ ಆವೃತ್ತವಾಗಿದ್ದು ಹೀಗಾಗಿ ಭಾರತವು ನಾಸಾ ನಕ್ಷೆಯಲ್ಲಿ ಶೈನಿಂಗ್ ಪಡೆದಿದೆ.
ನಕ್ಷೆಯಲ್ಲಿ ಭಾರತದ ಗ್ರಾಮಗಳಲ್ಲಿ ಹೆಚ್ಚು ವಿದ್ಯುತ್ ದೀಪಗಳು ಕಾಣುತ್ತಿದೆ. ಗ್ರಾಮಗಳಲ್ಲಿ ಬಯಲು ಪ್ರದೇಶಗಳು ಹೆಚ್ಚಾಗಿರುತ್ತದೆ. ಹೀಗಾಗಿ ಬೆಳಕು ಹೆಚ್ಚು ವ್ಯಾಪಿಸಿದಂತೆ ತೋರುತ್ತವೆ. ಚೀನಾದಲ್ಲಿ ದೊಡ್ಡ ನಗರಗಳ ಸಂಖ್ಯೆ ದೊಡ್ಡದಿದ್ದು ಅದರಲ್ಲಿರುವ ಬೆಳಕು ಅಷ್ಟು ಪ್ರಖರವಾಗಿ ಕಾಣುವುದಿಲ್ಲ ಎಂದು ಚೀನಾದ ಗ್ರಿಡ್ ಕಾರ್ಪೋರೇಷನ್ ಸಂಸ್ಥೆ ವಾದಿಸುತ್ತದೆ.
ಇನ್ನು ಭಾರತದಲ್ಲಿ 30 ಕೋಟಿ ಜನರಿಗೆ ವಿದ್ಯುತ್ ಸೌಲಭ್ಯವೇ ಇಲ್ಲ. 18 ಸಾವಿರ ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆಯೇ ಇಲ್ಲ. ಆದರೆ ನಕ್ಷೆಯಲ್ಲಿ ಭಾರತ ಹೇಗೆ ಹೊಳೆಯುತ್ತಿದೆ ಎಂದು ಚೀನಾ ಪತ್ರಿಕೆಗಳು ಅಚ್ಚರಿ ವ್ಯಕ್ತಪಡಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತವು ವಿದ್ಯುದೀಕರಣ ಯೋಜನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವುದು ಚೀನಾದ ಗಮನಕ್ಕೆ ಬಂದಿಲ್ಲ ಎಂದು ಕಾಣುತ್ತದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ಬರೆದಿದೆ.