ಸ್ಯಾನ್ ಫ್ರಾನ್ಸಿಸ್ಕೋ: ಕಾರ್ ಬ್ಯಾಟರಿಗೆ ಸಂಬಂಧಿಸಿದಂತೆ ಚೀನಾ ಸಂಸ್ಥೆಯೊಂದಿಗೆ ಟೆಕ್ ಕ್ಷೇತ್ರದ ಅಗ್ರಮಾನ್ಯ ಸಂಸ್ಥೆ ಆಪಲ್ ಗೌಪ್ಯವಾಗಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಎಲೆಕ್ಟ್ರಿಕ್ ಕಾರ್ ಯೋಜನೆಯೊಂದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಚೀನಾ ಸಂಸ್ಥೆಯೊಂದಿಗೆ ಆಪಲ್ ಕೈ ಜೋಡಿಸಿದ್ದು, ವಾಹನ ಬ್ಯಾಟರಿ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯ ಮುಂದುವರೆದಿದೆ. ಚೀನಾದ ಫುಜಿಯನ್ ಪ್ರಾಂತ್ಯದಲ್ಲಿ ಈ ಯೋಜನೆಯ ಸಂಶೋಧನೆ ನಡೆಯುತ್ತಿದೆ.
2013 ರಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಲಗ್ಗೆ ಇಡುವುದರ ಬಗ್ಗೆ ಸೂಚನೆ ನೀಡಿದ್ದ ಆಪಲ್, ನಂತರದ ದಿನಗಳಲ್ಲಿ ಸ್ವಯಂ ಚಾಲಿತ ಸಾಫ್ಟ್ ವೇರ್ ನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿತ್ತು. ಚೀನಾದ ಸಿಎಟಿಎಲ್ ಸಂಸ್ಥೆಯೊಂದಿಗೆ ಕಾರ್ ಬ್ಯಾಟರಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಆಪಲ್ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ, ಇನ್ನು ಸಿಎಟಿಎಲ್ ಸಹ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.