ಸ್ಪೀಕರ್ ಸುಮಿತ್ರಾ ಮಹಾಜನ್ 
ದೇಶ

ಸಂಸದರು ಮಾಡಿದ್ದು ದೊಡ್ಡ ತಪ್ಪು, ಇಡೀ ದೇಶ ಇದನ್ನು ನೋಡಲಿ: ಸ್ಪೀಕರ್ ಸುಮಿತ್ರಾ ಮಹಾಜನ್ ಅಸಮಾಧಾನ

ಬೋಫೋರ್ಸ್ ಹಗರಣ ಹಾಗೂ ಗೋರಕ್ಷಕರ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ನಡೆಸಿದ ಗಲಾಟೆಗೆ ಸಂಬಂಧಿಸಿದಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಬೋಫೋರ್ಸ್ ಹಗರಣ ಹಾಗೂ ಗೋರಕ್ಷಕರ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ನಡೆಸಿದ ಗಲಾಟೆಗೆ ಸಂಬಂಧಿಸಿದಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಕಲಾಪದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಕಲಾಪದ ವೇಳೆ ಕಾಂಗ್ರೆಸ್ ಸಂಸದರ ನಡವಳಿಕೆ ನಿಜಕ್ಕೂ ನೋವು ತಂದಿದೆ. ಶೂನ್ಯ ವೇಳೆಗೆ ತುಂಬಾ ಪ್ರಾಮುಖ್ಯತೆ  ಇದ್ದು, ಪ್ರಶ್ನೋತ್ತರಕ್ಕೆ ಮಾತ್ರ ಮೀಸಲಾಗಿರುವ ಈ ಸಮಯವನ್ನು ಸಂಸದರು ವ್ಯರ್ಥ ಮಾಡಿದ್ದಾರೆ. ಅಂತೆಯೇ ಕಾರ್ಯದರ್ಶಿಗಳ ಟೇಬಲ್ ಮೇಲಿದ್ದ ಪ್ರಮುಖ ದಾಖಲೆಗಳ ಕಾಗದ ಪತ್ರಗಳನ್ನು ಕಿತ್ತು ಎಸೆದಿದ್ದಾರೆ. ಅವುಗಳು  ಅಧಿಕೃತ ಕಚೇರಿ ಕಾಗದ ಪತ್ರಗಳು. ಇವುಗಳನ್ನು ಅನುಮತಿ ಇಲ್ಲದೇ ಮುಟ್ಟಿದ್ದೇ ಅಪರಾಧ. ಅಂತಹುದರಲ್ಲೇ ಅವುಗಳನ್ನು ಎಸೆದಾಡಿದ್ದಾರೆ.

ಎಚ್ಚರಿಕೆ ಹೊರತಾಗಿಯೂ ನಾಲ್ಕು ಬಾರಿ ಪೇಪರ್ ಗಳನ್ನು ಎಸೆದಾಡಿದ್ದಾರೆ. ಅಲ್ಲದೆ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಸುಮಿತ್ರಾ ಮಹಾಜನ್ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಶ್ನೋತ್ತರ  ವೇಳೆಯಲ್ಲಿ ಈ ಬಗ್ಗೆ ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲು ಅವಕಾಶ ನೀಡುತ್ತೇನೆ ಎಂದು ಹೇಳಿದರು.

ಸಂಸದರು ಮಾಡಿದ್ದು ತಪ್ಪು, ಆದರೆ ಇಷ್ಟು ಕಠಿಣ ಶಿಕ್ಷೆ ನೀಡಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಸಂಸದರ ವರ್ತನೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಅವರು ಮಾಡಿದ್ದು ತಪ್ಪು. ಆದರೆ ಇದಕ್ಕೆ ಇಷ್ಟು ಕಠಿಣ ಶಿಕ್ಷೆ  ನೀಡಬಾರದಿತ್ತು. ಈ ಬಗ್ಗೆ ನಾಳೆ ಕಲಾಪದಲ್ಲಿ ಪ್ರಸ್ತಾಪಿಸುತ್ತೇನೆ ಮತ್ತು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಕೂರುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

SCROLL FOR NEXT