ಅಪರಾಧಿ ಸುರೇಂದ್ರ ಕೋಲಿ (ಸಂಗ್ರಹ ಚಿತ್ರ)
ಘಜಿಯಾಬಾದ್: ಇಡೀ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸಿಥಾರಿ ಅತ್ಯಾಚಾರ ಮತ್ತು ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊನೀಂದರ್ ಸಿಂಗ್ ಪಂದೆರ್ ಮತ್ತು ಸುರೇಂದ್ರ ಕೋಲಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.
20 ವರ್ಷದ ಯುವತಿ ಪಿಂಕಿ ಸರ್ಕಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ಪವನ್ ತಿವಾರಿಯವರು ತೀರ್ಪು ಪ್ರಕಟಿಸಿದ್ದಾರೆ. ನೋಯ್ಡಾದ ನಿತಾರಿಯಲ್ಲಿ ನಡೆದಿದ್ದ 16 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಪೈಕಿ ಇದೂ ಒಂದಾಗಿದೆ.
16 ಪ್ರಕರಣಗಳ ಪೈಕಿ 8 ಪ್ರಕರಣಗಳಲ್ಲಿ ತೀರ್ಪು ಪ್ರಕಟಗೊಂಡಿದೆ. ಪ್ರಮುಖ ಆರೋಪಿ ಸುರೇಂದ್ರ ಕೋಲಿಗೆ ನ್ಯಾಯಾಲಯ ಎಲ್ಲಾ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ವಿಧಿಸಿದೆ.
ಮಹಿಳೆ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ದೊರಕಿರುವ ವಿಧಿವಿಜ್ಞಾನ ಪ್ರಯೋಗಾಲಯದ ಸಾಕ್ಷ್ಯಾಧಾರಗಳಿನುಸಾರವಾಗಿ ಇಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲ ಜೆ.ಪಿ. ಶರ್ಮಾ ಅವರು ಆರೋಪಿಗಳಿಗೆ ಮರಣ ದಂಡನೆ ನೀಡುವಂತೆ ಮನವಿ ಮಾಡಿದ್ದರು.
2006ರ ಅಕ್ಟೋಬರ್ 5 ಕೆಲಸದಿಂದ ಮನೆ ಮಹಿಳೆಯೊಬ್ಬರು ಹಿಂತಿರುಗುತ್ತಿದ್ದರು. ಆರೋಪಿ ಪಂದೆರ್ ಮನೆಯ ಬಳಿ ಬರುತ್ತಿದ್ದ ಮಹಿಳೆಯನ್ನು ನೋಡಿದ್ದ ಕೋಲಿ ಆಕೆಯ ಮೇಲೆ ಆಕರ್ಷಿತ ಗೊಂಡಿದ್ದಾರೆ. ನಂತರ ಮನೆಯೊಳಗೆ ಮಹಿಳೆಯನ್ನು ಬಲವಂತದಿಂದ ಕರೆದೊಯ್ಡು ಆಕೆಯ ಮೇಲೆ ಅತ್ಯಾಚಾರವೆಸಗಲಿ ರುಂಡವನ್ನು ಕತ್ತರಿಸಿ ಹತ್ಯೆ ಮಾಡಿದ್ದ. ತನಿಖೆ ನಡೆಸುತ್ತಿದ್ದ ವೇಳೆ ಪಂದೆರ್ ಮನೆಯ ಹಿಂಭಾಗದಲ್ಲಿ ಮಹಿಳೆಯ ರುಂಡ ದೊರಕಿತ್ತು. ಇದಾದ ಬಳಿಕ ಹವಾರು ಮಾನವ ಅವಶೇಷಗಳು ಪತ್ತೆಯಾಗಿದ್ದವು. ಇದರಂತೆ ಸರಣಿ ಕಗ್ಗೊಲೆ ಪ್ರಕಱಣಗಳು ಬೆಳಕಿಗೆ ಬಂತಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos