ಹಜ್ ಯಾತ್ರೆಗೆ ತೆರಳಿದವರಿಗೆ ಶುಭ ಕೋರಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ
ಶ್ರೀನಗರ: ಈ ವರ್ಷ ಹಜ್ ಯಾತ್ರೆಗೆ ಸುಮಾರು 8,100 ಯಾತ್ರಿಕರು ತೆರಳುತ್ತಿದ್ದು, ಅವರಲ್ಲಿ 800 ಮಂದಿ ಯಾತ್ರಿಕರ ಮೊದಲ ತಂಡ ಶ್ರೀನಗರದಿಂದ ಸೌದಿ ಅರೇಬಿಯಾಕ್ಕೆ ಇಂದು ಪ್ರಯಾಣ ಬೆಳೆಸಿತು.
ವಾರ್ಷಿಕ ಹಜ್ ಯಾತ್ರೆ ಇಂದು ಆರಂಭಗೊಂಡಿದ್ದು, 840 ಯಾತ್ರಿಕರು ಇಂದು ಶ್ರೀನಗರದ ಹಜ್ ಹೌಸ್ ನಿಂದ ವಿಮಾನದಲ್ಲಿ ತೆರಳಿದರು.
ಯಾತ್ರೆ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶ್ರೀನಗರ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಖಮರ್ ಸಾಜದ್, ಸುಮಾರು 8,100 ಯಾತ್ರಿಕರು ಈ ವರ್ಷ ಹಜ್ ಆಚರಿಸಲಿದ್ದಾರೆ. ಅದಕ್ಕಾಗಿ ಯಾತ್ರಿಕರ ಮೊದಲ ತಂಡ ಇಂದು ಎರಡು ವಿಮಾನಗಳಲ್ಲಿ ಶ್ರೀನಗರ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ತೆರಳಿದೆ. ಯಾತ್ರಿಕರು ತೆರಳುವ ಪ್ರಕ್ರಿಯೆ ಆಗಸ್ಟ್ 3ರವರೆಗೆ ಮುಂದುವರಿಯಲಿದೆ ಎಂದು ಹೇಳಿದರು.