ದೇಶ

ತಮಿಳುನಾಡು ಶಾಲಾ, ಕಾಲೇಜ್ ಗಳಲ್ಲಿ ವಂದೇ ಮಾತರಂ ಕಡ್ಡಾಯ: ಹೈಕೋರ್ಟ್ ಆದೇಶ

Lingaraj Badiger
ಚೆನ್ನೈ: ಸರ್ಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜ್ ಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಶಾಲಾ ಕಾಲೇಜ್ ಗಳುಗಳಲ್ಲಿ ವಿದ್ಯಾರ್ಥಿಗಳು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ವಂದೇ ಮಾತರಂ ಹಾಡಬೇಕು. ಇತರೆ ಸಂಸ್ಥೆಗಳಾದ ಸರ್ಕಾರಿ ಕಚೇರಿ, ಸಂಸ್ಥೆ, ಖಾಸಗಿ ಕಂಪನಿಗಳು, ಕೈಗಾರಿಗಳಲ್ಲಿ ಕನಿಷ್ಠ ತಿಂಗಳ ಒಮ್ಮೆಯಾದರೆ ರಾಷ್ಟ್ರೀಯ ಗಿತೆ ಹಾಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ರಾಷ್ಟ್ರೀಯ ಗೀತೆಯನ್ನು ಹಾಡಲು ಅಥವಾ ನುಡಿಸಲು ಕಷ್ಟವಾದರೆ ಅವರಿಗೆ ಹಾಡುವಂತೆ ಒತ್ತಾಯಿಸಬಾರದು. ಆದರೆ ಹಾಡದೇ ಇರುವುದಕ್ಕೆ ಅವರು ಸೂಕ್ತ ಕಾರಣ ನೀಡಬೇಕು ಎಂದು ನ್ಯಾಯಮೂರ್ತಿ ಎಂ ವಿ ಮುರಳಿಧರನ್ ಅವರು ಹೇಳಿದ್ದಾರೆ.
ಈಗಾಗಲೇ ಸುಪ್ರೀಂ ಕೋರ್ಟ್ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವ ಮುನ್ನ ರಾಷ್ಟ್ರ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದೆ.
SCROLL FOR NEXT