ಬುರ್ಗಾಂವ್ ನಲ್ಲಿ ದೋಣಿಯಲ್ಲಿ ಸಾಗುತ್ತಿರುವ ಕುಟುಂಬಸ್ಥರು 
ದೇಶ

ಅಸ್ಸಾಂನಲ್ಲಿ ಸುಧಾರಿಸಿದ ಪ್ರವಾಹ ಪರಿಸ್ಥಿತಿ: ಮುಂದುವರೆದ ಮರಣ ಮೃದಂಗ, ಸಾವಿನ ಸಂಖ್ಯೆ 77ಕ್ಕೆ ಏರಿಕೆ

ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಅಸ್ಸಾಂ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಪ್ರವಾಹದ ಪರಿಣಾಮದಿಂದಾಗಿ ಸಾವಿನ ಸಂಖ್ಯೆ 77ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ...

ಗುವಾಹಟಿ: ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಅಸ್ಸಾಂ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಪ್ರವಾಹದ ಪರಿಣಾಮದಿಂದಾಗಿ ಸಾವಿನ ಸಂಖ್ಯೆ 77ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 
ಅಸ್ಸಾಂನ ಒಟ್ಟು 7 ಜಿಲ್ಲೆಗಳ 23,118 ಜನರ ಮೇಲೆ ಪ್ರವಾಹ ಗಂಭೀರ ಪರಿಣಾಮ ಬೀರಿದೆ. ಪ್ರವಾಹಪೀಡಿತ ಜನರಿಗಾಗಿ 19 ಪರಿಹಾರ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಈಗಾಗಲೇ ಎಎಸ್'ಡಿಎಂಎ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ. 
ಮಳೆಯ ಆರ್ಭಟಕ್ಕೆ ಸಾಕಷ್ಟು ಹಲವೆಡೆ ಬೆಳೆಗಳು ಸಂಪೂರ್ಣವಾಗಿ ನಾಶಗೊಂಡಿವೆ, ಕೆಲ ನದಿಗಳು ಅಪಾಯಮಟ್ಟ ತಲುಪಿದ್ದರೂ, ಮಳೆಯ ಆರ್ಭಟ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ ಎಂದು ಹೇಳಲಾಗುತ್ತಿದೆ. 
ಪ್ರವಾಹ ಪೀಡಿತ ಅಸ್ಸಾಂ ರಾಜ್ಯಕ್ಕೆ 7 ಸದಸ್ಯರ ಆಂತರಿಕ ಸಚಿವಾಲಯದ ಕೇಂದ್ರೀಯ ತಂಡದೊಂದಿಗೆ ಮುಖ್ಯ ಕಾರ್ಯದರ್ಶಿ ವಿ ಕೆ ಪೈಪೆರ್ಸೆನಿಯಾ ಭೇಟಿ ನೀಡುತ್ತಿದ್ದು, ಪರಿಸ್ಥಿತಿಯವನ್ನು ಅವಲೋಕನೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ