ಸುಷ್ಮಾ ಸ್ವರಾಜ್ 
ದೇಶ

ಟಿಬೆಟ್, ಸ್ಟಾಪ್ಲಡ್ ವೀಸಾ ವಿಷಯಗಳನ್ನು ಭಾರತ ಚೀನಾದೊಂದಿಗೆ ಪ್ರಸ್ತಾಪಿಸಿದೆ: ಸುಷ್ಮಾ ಸ್ವರಾಜ್

ಟಿಬೆಟ್ ಜನಗಳ ನೋವು ಹಾಗೂ ಅರುಣಾಚಲ ಪ್ರದೇಶದವರಿಗೆ ಚೀನಾ ಸ್ಟಾಪ್ಲಡ್ ವೀಸಾ ನೀಡುತ್ತಿರುವ ವಿಷಯಗಳನ್ನು ಚೀನಾದೊಂದಿಗೆ ಭಾರತ ಪ್ರಸ್ತಾಪಿಸಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ

ನವದೆಹಲಿ: ಟಿಬೆಟ್ ಜನಗಳ ನೋವು ಹಾಗೂ ಅರುಣಾಚಲ ಪ್ರದೇಶದವರಿಗೆ ಚೀನಾ ಸ್ಟಾಪ್ಲಡ್ ವೀಸಾ ನೀಡುತ್ತಿರುವ ವಿಷಯಗಳನ್ನು ಚೀನಾದೊಂದಿಗೆ ಭಾರತ ಪ್ರಸ್ತಾಪಿಸಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 
ಅರುಣಾಚಲ ಪ್ರದೇಶದಲ್ಲಿರುವ ನಾಗರಿಕರಿಗೆ ಚೀನಾ ತನ್ನ ವೀಸಾ (ಸ್ಟಾಪ್ಲಡ್ ವೀಸಾ) ನೀಡುತ್ತಿರುವ ಬಗೆಗಿನ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಪ್ರಧಾನಿಯೂ ಸೇರಿದಂತೆ ವಿವಿಧ ಹಂತಗಳಲ್ಲಿ ನಡೆದಿರುವ ದ್ವಿಪಕ್ಷೀಯ ಮಾತುಕತೆಗಳಲ್ಲಿ ಈ ವಿಷಯವನ್ನು ಚೀನಾದೊಂದಿಗೆ ಪ್ರಸ್ತಾಪಿಸಲಾಗಿದೆ. ಇದೇ ವೇಳೆ ಟಿಬೆಟ್ ಬಗ್ಗೆ ಭಾರತದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಸುಷ್ಮಾ ಸ್ವರಾಜ್, ಈ ಹಿಂದೆ ನಾವು ಒಂದೇ ಚೀನಾ ನೀತಿ ಬಗ್ಗೆ 
ಮಾತನಾಡುತ್ತಿದ್ದೆವು ಹಾಗೆಯೇ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದೆವು. ಚೀನಾ ನಮ್ಮ ನೀತಿಯನ್ನು ಗೌರವಿಸಬೇಕು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದಿದ್ದಾರೆ. 
ಟಿಬೆಟ್ ವಿಷಯದಲ್ಲಿ ಭಾರತ ಮೂಕಪ್ರೇಕ್ಷಕನಾಗಿ ಕುಳಿತಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಟಿಬೆಟ್ ಕುರಿತು ಚೀನಾವನ್ನು ಪ್ರಶ್ನಿಸಿದ್ದೇವೆ ಹಾಗೂ ಆ ವಿಷಯವನ್ನು ಚರ್ಚಿಸಿದ್ದೇವೆ ಅಷ್ಟೇ ಅಲ್ಲದೇ ಟಿಬೆಟ್ ಧರ್ಮಗುರು ದಲೈ ಲಾಮ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದಕ್ಕೂ ಅವಕಾಶ ಮಾಡಿಕೊಟ್ಟಿದ್ದೇವೆ, ಭಾರತದ ಹಿತಾಸಕ್ತಿಗೆ ಧಕ್ಕೆ ಬರುವಂಥಹದ್ದು ಏನೇ ನಡೆದರೂ ರಾಜತಾಂತ್ರಿಕ ಪ್ರತಿಭಟನೆಯೊಡ್ಡುತ್ತೇವೆ ಎಂದು ಸುಷ್ಮಾ ಸ್ವರಾಜ್ ಸದನಕ್ಕೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?