ಸಂಗ್ರಹ ಚಿತ್ರ 
ದೇಶ

ಕಾರು ಅಪಘಾತ: ಕುಡಿದ ಮತ್ತಿನಲ್ಲಿ ಮಹಿಳೆ ನೆರವಿಗೆ ಬಂದ ಪೊಲೀಸ್ ಪೇದೆಗೆ ಚುಂಬನ

ಚಿಂಗ್ರಿಘಾಟ್ ಮೋರ್ ಬೈಪಾಸ್ ನಲ್ಲಿ ಕುಡಿದ ಮತ್ತಿನಲ್ಲಿ ಕಾರು ಅಪಘಾತ ಮಾಡಿದ್ದ ಮಹಿಳೆ ನೆರವಿಗೆ ದಾವಿಸಿದ ಪೊಲೀಸ್ ಪೇದೆಗೆ ಚುಂಬಿಸಿರುವ ಘಟನೆ ನಡೆದಿದೆ...

ಕೋಲ್ಕತ್ತಾ: ಚಿಂಗ್ರಿಘಾಟ್ ಮೋರ್ ಬೈಪಾಸ್ ನಲ್ಲಿ ಕುಡಿದ ಮತ್ತಿನಲ್ಲಿ ಕಾರು ಅಪಘಾತ ಮಾಡಿದ್ದ ಮಹಿಳೆಯ ನೆರವಿಗೆ ಧಾವಿಸಿದ ಪೊಲೀಸ್ ಪೇದೆಗೆ ಅದೇ ಮಹಿಳೆ ಚುಂಬನ ನೀಡಿರುವ ಘಟನೆ ನಡೆದಿದೆ. 
38 ವರ್ಷದ ಮಹಿಳೆ ತನ್ನ ಸ್ನೇಹಿತೆ ಮತ್ತು ಸ್ನೇಹಿತನೊಂದಿಗೆ ಕಳೆದ ರಾತ್ರಿ ಪಾರ್ಟಿ ಮುಗಿಸಿಕೊಂಡು ಬಂದಿದ್ದಾರೆ. ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದಿದ್ದ ಮಹಿಳೆ ಕಾರು ಚಲಾಯಿಸಿದ್ದು ಬೈಪಾಸ್ ರೋಡ್ ನಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾಳೆ. ಈ ವೇಳೆ ಟ್ಯಾಕ್ಸಿ ಚಾಲಕನೊಬ್ಬ ಆಕೆಯನ್ನು ರಕ್ಷಿಸಲು ಮುಂದಾದಾಗ ಆಕೆ ಆತನಿಗೆ ಥಳಿಸಿದ್ದಾಳೆ. 
ಇನ್ನು ಕಾರಿನಲ್ಲಿ ಹಿಂಬದಿ ಕುಳಿತಿದ್ದ ಮಹಿಳೆ ಮತ್ತು ವ್ಯಕ್ತಿ ಇಬ್ಬರನ್ನು ಪೊಲೀಸ್ ಪೇದೆ ಹೊರಗಡೆ ಎಳೆದಿದ್ದಾರೆ. ಈ ವೇಳೆ ಬಿದ್ಧಾನಗರ್ ಪೊಲೀಸ್ ಠಾಣೆ ಮತ್ತು ಬೇಲಿಘಾಟ್ ಸಂಚಾರಿ ಪೊಲೀಸ್ ಪೇದೆಯನ್ನು ತಬ್ಬಿಕೊಂಡ ಮಹಿಳೆ ಸತತವಾಗಿ ಮುತ್ತಿಟ್ಟಿದ್ದಾಳೆ ಎಂದು ಪೊಲೀಸ್ ತಿಳಿಸಿದ್ದಾರೆ. 
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಪೇದೆ ಸ್ಥಳೀಯ ಮಹಿಳೆಯನ್ನು ಸಹಾಯಕ್ಕೆ ಕೋರಿದ್ದು ಆಕೆಯ ಸಹಾಯದೊಂದಿಗೆ ಇಬ್ಬರು ಮಹಿಳೆಯರು ಮತ್ತು ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. 
ಮೂವರ ಮೇಲೆ ಕುಡಿದು ಕಾರು ಚಾಲನೆ ಪ್ರಕರಣವನ್ನು ದಾಖಲಿಸಲಾಗಿದೆ. ಕಾಲೇಜ್ ಸ್ಟ್ರೀಟ್ ನ ನಿವಾಸಿಗಳಾಗಿದ್ದ ಅವರೆಲ್ಲಾ ದುರ್ಗಾ ಪೂಜಾ ಸಮಿತಿಯ ಸದಸ್ಯರಾಗಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ; ಸರ್ವಪಕ್ಷ ಸಭೆಯಲ್ಲಿ ‘ಒಗ್ಗಟ್ಟಿನ ಮಂತ್ರ’: ರೈತರ ಹಿತವೇ ರಾಜಕೀಯಕ್ಕಿಂತ ಮೇಲು ಎಂದ CM ಡಿಕೆಶಿ

ಕಾವೇರಿ ಕಿಚ್ಚು: ‘ಭೂಮಿ-ನೀರು-ಭಾಷೆ ವಿಚಾರ ಬಂದಾಗ ಕರ್ನಾಟಕ ಒಂದಾಗಬೇಕು’: ಸಿದ್ದರಾಮಯ್ಯ

ಭೀಕರ ಹಿಮಪಾತ: 3 ದಿನಗಳ ನಂತರ ಪರ್ವತಾರೋಹಿ Nirmal Purja ಮೃತದೇಹ ಪತ್ತೆ

‘ಕಾವೇರಿ ನೀರಿನ ಒಳಹರಿವು ಬಳಸಿಕೊಳ್ಳಿ, ರೈತರ ಹಿತ ಕಾಪಾಡಿ’: ಸರ್ಕಾರಕ್ಕೆ ಬಿವೈ ವಿಜಯೇಂದ್ರ ಸಲಹೆ

‘ಮಗಳನ್ನು ಕ್ಷಮಿಸಿ ಮೋದಿಜಿ ಹೊಸ ಜೀವನ ಕೊಟ್ಟಿದ್ದಾರೆ, ಮಕ್ಕಳಿಗೆ Instagram, Facebook ಬೇಡ': ಪ್ರಧಾನಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ