ದೇಶ

ನಿತೀಶ್‌ ನಿರ್ಧಾರಕ್ಕೆ ತಮ್ಮ ಬೆಂಬಲವಿಲ್ಲ, ಸೂಕ್ತ ಸಂದರ್ಭದಲ್ಲಿ ಪ್ರಶ್ನಿಸುತ್ತೇನೆ: ಜೆಡಿಯು ಸಂಸದ ಅಲಿ ಅನ್ವರ್

Srinivasamurthy VN

ಪಾಟ್ನಾ: ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಇದೀಗ ಬಿಜೆಪಿ-ಜೆಡಿಯು ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಜೆಡಿಯು ಸಂಸದರೊಬ್ಬರು ನಿತೀಶ್ ಕುಮಾರ್ ನಿರ್ಧಾರವನ್ನು ಬಹಿರಂಗವಾಗಿಯೇ  ವಿರೋಧಿಸಿದ್ದಾರೆ.

ಎನ್‌ಡಿಎ ಸೇರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ನಿರ್ಧಾರಕ್ಕೆ ಜೆಡಿ(ಯು) ಪಕ್ಷದೊಳಗಡೆಯೇ ಕೆಲವರಿಂದ ವಿರೋಧ ವ್ಯಕ್ತವಾಗಿದ್ದು, ಜೆಡಿಯು ಪಕ್ಷದ ರಾಜ್ಯಸಭೆ ಸದಸ್ಯ ಅಲಿ ಅನ್ವರ್ ಅವರು ನಿತೀಶ್ ಕುಮಾರ್  ನಿರ್ಧಾರವನ್ನು ವಿರೋಧಿಸಿದ್ದಾರೆ. ನಿತೀಶ್ ಅವರ ನಿರ್ಧಾರವನ್ನು ಬೆಂಬಲಿಸುವುದಿಲ್ಲ ಎಂದು  ಅವರು, ಅವಕಾಶ ದೊರೆತರೆ ಈ ಕುರಿತು ಪಕ್ಷದ ನಾಯಕರ ಜತೆ ಚರ್ಚಿಸಲು ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ಕುರಿತು ಕಿಡಿಕಾರಿರುವ ಅನ್ವರ್ ಅಲಿ ಅವರು, ಈ ಹಿಂದೆ ನಾವು ಯಾವ ಕಾರಣಗಳಿಂದಾಗ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿದ್ದೆವೋ ಇಂದಿಗೂ ಬಿಜೆಪಿಯಲ್ಲಿ ಅದೇ ಪರಿಸ್ಥಿತಿ ಮುಂದುವರೆದಿದೆ. ಹೀಗಾಗಿ  ನಿತೀಶ್ ಕುಮಾರ್ ಅವರ ನಿರ್ಧಾರ ಸರಿಯಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಭೆಯಲ್ಲಿ ತಮಗೆ ಅವಕಾಶ ದೊರೆತರೆ ಖಂಡಿತಾ ಈ ಬಗ್ಗೆ ಪ್ರಶ್ನಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯೆಗೆ ಶರದ್ ಯಾದವ್ ನಕಾರಾ
ಏತನ್ಮಧ್ಯೆ ನಿತೀಶ್ ಕುಮಾರ್ ಅವರ ಈ ದಿಢೀರ್ ನಿರ್ಧಾರಕ್ಕೆ ಸಂಬಂಧಿಸಿದಂತೆ ಜೆಡಿಯು ಮುಖ್ಯಸ್ಥ ಶರದ್ ಯಾದವ್ ನಿರಾಕರಿಸಿದ್ದಾರೆ.

SCROLL FOR NEXT