ದೇಶ

ಮಕ್ಕಳ ಕಳ್ಳಸಾಗಾಣೆ: ಸಿಐಡಿಯಿಂದ ಬಿಜೆಪಿ ಸಂಸದೆ ರೂಪಾ ಗಂಗೂಲಿ ವಿಚಾರಣೆ

Lingaraj Badiger
ಕೊಲ್ಕತಾ: ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣ ಸಂಬಂಧ ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರನ್ನು ಅಪರಾಧ ತನಿಖಾ ಇಲಾಖೆ(ಸಿಐಡಿ) ಶನಿವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಇಂದು ಬೆಳಗ್ಗೆ ಕೊಲ್ಕತಾದ ಗಾಲ್ಫ್ ಗ್ರೀನ್ ನಲ್ಲಿರುವ ಬಿಜೆಪಿ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳ ತಂಡ, ಅಲ್ಲಿಯೇ ಅವರನ್ನು ವಿಚಾರಣೆಗೆ ನಡೆಸುತ್ತಿದೆ.
ಈ ಪ್ರಕರಣ ಸಂಬಂಧ ರೂಪಾ ಗಂಗೂಲಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಸೇರಿದಂತೆ ನಾಲ್ವರ ವಿರುದ್ಧ ಸಿಐಡಿ ಪ್ರಕರಣ ದಾಖಲಿಸಿಕೊಂಡಿದೆ. 
ಮಕ್ಕಳ ಕಳ್ಳಸಾಗಣೆಕೆ ಆರೋಪದಡಿ ಪಶ್ಚಿಮ ಬಂಗಾಳದ ಪೊಲೀಸರು ದಾರ್ಜಿಲಿಂಗ್ ನಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಘಟಕದ ನಾಯಕಿ ಜೂಹಿ ಚೌಧರಿ ಅವರನ್ನು ಬಂಧಿಸಿತ್ತು. ವಿಚಾರಣೆ ವೇಳೆ ರೂಪಾ ಗಂಗೂಲಿ ಮತ್ತು ಕೈಲಾಶ್ ವಿಜಯವರ್ಗೀಯಾ ಅವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ರೂಪಾ ಗಂಗೂಲಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.
SCROLL FOR NEXT