ಶ್ರೀನಗರ: ಎಕೆ 47 ರೈಫಲ್ ನೊಂದಿಗೆ ಪರಾರಿಯಾಗಿದ್ದ ಭಾರತೀಯ ಯೋಧ ಜಾಹೂರ್ ಅಹಮದ್ ಠಾಕೂರ್ ಇದೀಗ ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆ ಸೇರಿರುವುದಾಗಿ ಉಗ್ರ ಸಂಘಟನೆ ಹೇಳಿದೆ.
ಕಾಶ್ಮೀರದ ಸ್ವಾತಂತ್ರ್ಯ ಹೋರಾಟವನ್ನು ದೂಷಿಸುವ ಸಲುವಾಗಿ ಮಾಧ್ಯಮಗಳ ಮೂಲಕ ಭಾರತದ ಏಜೆನ್ಸಿ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಾದ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಕಾಶ್ಮೀರದಲ್ಲಿ ಸಕ್ರಿಯವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಆದರೆ ಕಾಶ್ಮೀರದಲ್ಲಿ ಅಂತಹ ಯಾವುದೇ ಸಂಘಟನೆ ಇಲ್ಲ ಮತ್ತು ಅವುಗಳ ಯಾವುದೇ ಪಾತ್ರವೂ ಇಲ್ಲ ಎಂದು ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯ ವಕ್ತಾರ ಸಲೀಂ ಹಶ್ಮೀ ಇಮೇಲ್ ಮೂಲಕ ತಿಳಿಸಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲಾದ ಸೇನಾ ಕ್ಯಾಂಪ್ ನಿಂದ ಜಾಹೂರ್ ಅಹಮದ್ ಠಾಕೂರ್ ಕಳೆದ ವಾರ ಮೂರು ಎಕೆ 47 ರೈಫಲ್ ಮತ್ತು ಮೂರು ಮ್ಯಾಗ್ಜೈನ್ ನೊಂದಿಗೆ ಪರಾರಿಯಾಗಿದ್ದ. ಇತ ಇಂಜಿನಿಯರಿಂಗ್ ವಿಂಗ್ ನ 173 ಬೆಟಾಲಿಯನ್ ಬ್ಯಾಚ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.