ದೇಶ

ನಿತೀಶ್ ಕುಮಾರ್ ಕೈ ಕೊಟ್ಟ ನಂತರ ರಾಹುಲ್ ಗಾಂಧಿಗೆ ತೇಜಸ್ವಿ ಯಾದವ್ ಸಲಹೆ

Lingaraj Badiger
ಪಾಟ್ನಾ: ದಿಢೀರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಿರುದ್ಧ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ನಿತೀಶ್ ಕುಮಾರ್ ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು 2015ರ ಜನಾದೇಶಕ್ಕೆ ನಿತೀಶ್‌ ಕುಮಾರ್ ಅವರು ಅಗೌರವ ತೋರಿದ್ದಾರೆ ಎಂದಿದ್ದಾರೆ.
ಒಂದು ವೇಳೆ ನಿತೀಶ್ ಕುಮಾರ್ ಅವರು ಚುನಾವಣೆ ಎದುರಿಸುತ್ತಿದ್ದರೆ ಅವರು ಖಂಡಿತಾ ಸೋಲು ಅನುಭವಿಸುತ್ತಿದ್ದರು ಎಂದು ತೇಜಸ್ವಿ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಮಹಾಮೈತ್ರಿಕೂಟದಿಂದ ಹೊರಬಂದರೂ ಕಾಂಗ್ರೆಸ್ ಮೇಲೆ ಅಪಾರ ವಿಶ್ವಾಸ ನಂಬಿಕೆ ಇಟ್ಟಿರುವ ತೇಜಸ್ವಿ ಯಾದವ್,  ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೆಲವೊಂದು ಉಪದೇಶಗಳನ್ನು ನೀಡಿದ್ದಾರೆ.
ರಾಹುಲ್ ಗಾಂಧಿ ತುಂಬಾ ಜವಾಬ್ದಾರಿ ಇರುವ ವ್ಯಕ್ತಿ. ಅವರು ಸವಾಲುಗಳನ್ನು ಸ್ವೀಕರಿಸಬೇಕಾಗಿದೆ. ನಾನು ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರು ಬೆಂಬಲ ಪಡೆಯುವ ಕಾರ್ಯದಲ್ಲಿ ತೊಡಗಿದ್ದರು. ಅವರು ಅದನ್ನು ಮಾಡಿಯೇ ಮಾಡುತ್ತಾರೆ. ಆದರೆ ಅವರು ಪ್ರತಿ ಹೆಜ್ಜೆಯ ಬಗ್ಗೆ ಯೋಚಿಸಬೇಕಾಗಿದೆ ಎಂದಿದ್ದಾರೆ.
SCROLL FOR NEXT