ದೇಶ

12 ರಾಷ್ಟ್ರೀಯ ಹೆದ್ದಾರಿಗಳು ತುರ್ತು ಭೂಸ್ಪರ್ಶ ವಾಯುನೆಲೆಯಾಗಿ ಬಳಕೆ

Sumana Upadhyaya
ನವದೆಹಲಿ: ವಿಮಾನಗಳು ತುರ್ತು ಭೂ ಸ್ಪರ್ಶ ಮಾಡಲು 12 ರಾಷ್ಟ್ರೀಯ ಹೆದ್ದಾರಿಗಳನ್ನು ತುರ್ತು ಭೂಸ್ಪರ್ಶ ವಾಯುನೆಲೆ ಎಂದು  ಭಾರತೀಯ ವಾಯುಪಡೆ ಅನುಮೋದಿಸಿದೆ.
ಆರಂಭದಲ್ಲಿ ದೇಶದಲ್ಲಿ 21 ರಾಷ್ಟ್ರೀಯ ಹೆದ್ದಾರಿಗಳನ್ನು ವಾಯುನೆಲೆಯಾಗಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.  ಅವುಗಳಲ್ಲಿ ಸದ್ಯ 12 ರಾಷ್ಟ್ರೀಯ ಹೆದ್ದಾರಿಗಳಿಗೆ ಅನುಮೋದನೆ ನೀಡಲಾಗಿದೆ. ಮೂರು ಹೆದ್ದಾರಿಗಳು ಮಾವೋವಾದಿ ಪೀಡಿತ ಪ್ರದೇಶಗಳಾದ ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸ್ ಗಢವನ್ನು ಸಂಪರ್ಕಿಸುತ್ತದೆ. ಈ ಪ್ರದೇಶಗಳು ನೆರೆ, ಪ್ರವಾಹಗಳಿಗೂ ಆಗಾಗ ಸಿಲುಕುತ್ತಿರುತ್ತವೆ. 
21 ಹೆದ್ದಾರಿಗಳಲ್ಲಿ ಸದ್ಯ 12 ತುರ್ತು ಭೂ ಸ್ಪರ್ಶ ವಿಮಾನ ನಿಲುಗಡೆಗೆ ಕೇಂದ್ರ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಉಳಿದ ಹೆದ್ದಾರಿಗಳ ಬಗ್ಗೆ ಮಾತುಕತೆ, ಪರೀಕ್ಷೆ ನಡೆಯುತ್ತಿದ್ದು ಸದ್ಯದಲ್ಲಿಯೇ ಅವುಗಳಿಗೆ ಕೂಡ ಒಪ್ಪಿಗೆ ನೀಡಲಾಗುವುದು  ಎಂದು ಐಎಎನ್ಎಸ್ ಸುದ್ದಿಸಂಸ್ಥೆ ಹೇಳಿದೆ.
SCROLL FOR NEXT