ದೇಶ

ಛತ್ತೀಸ್ ಗಢದಲ್ಲಿ ಮೂವರು ನಕ್ಸಲರ ಬಂಧನ

Lingaraj Badiger
ರಾಯಪುರ: ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಎರಡು ಪ್ರತ್ಯೇಕ ಶೋಧ ಕಾರ್ಯಾಚರಣೆಯಲ್ಲಿ ಕೆಳ ಹಂತದ ಮೂವರು ನಕ್ಸಲರನ್ನು ಬಂಧಿಸಲಾಗಿದೆ.
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಹಾಗೂ ಜಿಲ್ಲಾ ಮೀಸಲು ಪೊಲೀಸ್ ಮತ್ತು ವಿಶೇಷ ಕಾರ್ಯಪಡೆ(ಎಸ್ ಟಿಎಫ್) ನಿನ್ನೆ ಜಂಟಿ ಶೋಧ ಕಾರ್ಯಚಾರಣೆ ನಡೆಸಿ ಸರ್ಗಿಪಾಲ್ ಗ್ರಾಮದಲ್ಲಿ ಮೂವರು ನಕ್ಸಲರನ್ನು ಬಂಧಿಸಲಾಗಿದೆ ಎಂದು ನಾರಾಯಣಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಅವರು ಇಂದು ಪಿಟಿಐಗೆ ತಿಳಿಸಿದ್ದಾರೆ.
ಬಂಧಿತ ನಕ್ಸಲರನ್ನು ಸೋನು ನೆತಾಮ್(40), ಸುರೇಶ್ ಮರ್ಕಾಮ್ ಹಾಗೂ ಶಂಕರ್ ಹೆಮ್ಲಾ(20) ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಗನ್ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ಮರ್ಕಾಮ್ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಸಂತೋಷ್ ಸಿಂಗ್ ಹೇಳಿದ್ದಾರೆ.
SCROLL FOR NEXT