ಸಂಗ್ರಹ ಚಿತ್ರ 
ದೇಶ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಸ್ತಿ ಮೂರು ಪಟ್ಟು ಹೆಚ್ಚಳ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಪದವಿಯನ್ನೇ ಪಡೆದಿಲ್ಲ!

ಗುಜರಾತ್ ರಾಜ್ಯಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜ್ಯಸಭೆಗೆ ಸ್ಪರ್ಧಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆಸ್ತಿ ಪ್ರಮಾಣ 3 ಪಟ್ಟು ಹೆಚ್ಚಳವಾಗಿದೆ ಎಂಬ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.

ನವದೆಹಲಿ: ಗುಜರಾತ್ ರಾಜ್ಯಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜ್ಯಸಭೆಗೆ ಸ್ಪರ್ಧಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆಸ್ತಿ ಪ್ರಮಾಣ 3 ಪಟ್ಟು ಹೆಚ್ಚಳವಾಗಿದೆ ಎಂಬ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.

ಇತ್ತೀಚೆಗಷ್ಟೇ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ರಾಜ್ಯಸಭೆ ಚುನಾವಣೆಗೆ ಗುಜರಾತ್‌'ನಿಂದ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಅವರು ತಮ್ಮ ನಾಮಪತ್ರದಲ್ಲಿ ತಮ್ಮ ಆಸ್ತಿ ಹಾಗೂ ಸ್ವತ್ತುಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ. ಅದರಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಸ್ತಿ ಆಸ್ತಿ ಕಳೆದ 5 ವರ್ಷಗಳಲ್ಲಿ 3 ಪಟ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 2012ರ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಅಮಿತ್ ಶಾ ಒಟ್ಟು 8.54 ಕೋಟಿ ರು. ಆಸ್ತಿ ಹೊಂದಿದ್ದರು. ಈಗ ಅವರ ಆಸ್ತಿಯ ಮೌಲ್ಯ 34.31 ಕೋಟಿ ರು.ಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಅಮಿತ್ ಶಾ ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರಕಾರ, 2012ರಲ್ಲಿ ಅಮಿತ್ ಶಾ 1.91 ಕೋಟಿ ರು. ಚರಾಸ್ತಿ ಮತ್ತು 6.63 ಕೋಟಿ ರು. ಸ್ಥಿರಾಸ್ತಿ ಮತ್ತು 2.60 ಕೋಟಿ ರು.ಸಾಲವನ್ನು ಹೊಂದಿದ್ದರು. ಆದರೆ, 2017 ರಲ್ಲಿ ಶಾ ಅವರ ಚರಾಸ್ತಿ 19.1  ಕೋಟಿ ರು., ಸ್ಥಿರಾಸ್ತಿ 15.30 ಕೋಟಿ ರು.ಗೆ ಏರಿಕೆಯಾಗಿಗಿದೆ. ಅಮಿತ್ ಶಾ 47.69 ಲಕ್ಷ ರು. ಸಾಲ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಸ್ಮೃತಿ ಇರಾನಿ ಪದವಿ ಪಡೆದಿಲ್ಲ, ಆಸ್ತಿ ದುಪ್ಪಟ್ಟು
ಏತನ್ಮಧ್ಯೆ ಈ ಹಿಂದೆ ನಕಲಿ ಪದವಿ ಪ್ರಮಾಣಪತ್ರ ವಿವಾದಕ್ಕೆ ಸಿಲುಕಿದ್ದ ಸಚಿವೆ ಸ್ಮತಿ ಇರಾನಿ ಅವರು ರಾಜ್ಯಸಭೆ ಚುನಾವಣೆಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು ವಾಣಿಜ್ಯ ಪದವಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಪ್ರಮಾಣ ಪತ್ರದ ವೇಳೆ ತಾವು ಡಿಗ್ರಿ ಪದವಿ ಪಡೆದಿದ್ದಾಗಿ ಸ್ಮತಿ ಹೇಳಿಕೊಂಡಿದ್ದರು. ಆದರೆ ಇದೀಗ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಸ್ಮೃತಿ ಇರಾನಿ ಇದರಲ್ಲಿ ತಾವು ವಾಣಿಜ್ಯ ಪದವಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವೆ ಸ್ಮತಿ ಇರಾನಿ ಆಸ್ತಿಯೂ ದುಪ್ಪಟ್ಟಾಗಿರುವ ವಿಚಾರರವೂ ಬೆಳಕಿಗೆ ಬಂದಿದ್ದು, 2014ರ ಲೋಕಸಭಾ ಟುನಾವಣೆಯಲ್ಲಿ ಸ್ಮತಿ 4.91 ಕೋಟಿ ರು. ಆಸ್ತಿ ಹೊಂದಿದ್ದರು. ಪ್ರಸ್ತುತ ಅವರ ಆಸ್ತಿ ಮೌಲ್ಯ 8.8 ಕೋಟಿ ರು.ಗಳಿಗೆ ಏರಿದೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಆಸ್ತಿ 2011ರಲ್ಲಿ 3.50 ಕೋಟಿ ರು.ನಿಂದ 2017ರಲ್ಲಿ 8.14 ಕೋಟಿ ರು.ಗೆ ಏರಿದೆ. ಬಿಜೆಪಿ ಇನ್ನೊಬ್ಬ ಅಭ್ಯರ್ಥಿ ಬಲವಂತ್ ಸಿನ್ಹ ರಜ ಪೂತ್ ಆಸ್ತಿ ಕೂಡ 263 ಕೋಟಿ ಯಿಂದ 316 ಕೋಟಿ ರು.ಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT