ದೇಶ

ಮುಂಬಯಿ: ಬ್ಲೂ ವೇಲ್ ಚಾಲೆಂಜ್ ಸೂಸೈಡ್ ಗೇಮ್ ಗೆ 14 ವರ್ಷದ ಬಾಲಕ ಬಲಿ?

Shilpa D
ಮುಂಬಯಿ: ಅಂಧೇರಿಯ ಬಾಲಕನೊಬ್ಬ ಶನಿವಾರ 7 ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿತ್ತು. 
ಮೃತ ಬಾಲಕನನ್ನು ಮನ್ ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಬ್ಲೂವೇಲ್ ಚಾಲೆಂಜ್ ಎಂಬ ಆನ್ ಲೈನ್ ಗೇಮ್ ದಾಸನಾಗಿದ್ದ ಎಂದು ವರದಿಯಾಗಿದೆ. ಈ ಗೇಮ್ ಪ್ರಕಾರ ಗ್ರೂಪ್ ಅಡ್ಮಿನಿಸ್ಟ್ರೇಟರ್  ಗೇಮ್ ನಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗೆ 50 ದಿನಗಳಲ್ಲಿ ಹಲವು ಟಾಸ್ಕ್ ಗಳನ್ನು ನೀಡುತ್ತಾರೆ.
ಎಲ್ಲಾ ಹಂತದ ಲೆವೆಲ್ ಗಳನ್ನು ದಾಟಿದ ನಂತರ ಅಂತಿವನಾಗಿ ಫೈನಲ್ ನಲ್ಲಿ ಗೆಲ್ಲಬೇಕೆಂದರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಅದರಂತೆ ಮನ್ ಪ್ರೀತ್ ಎಲ್ಲಾ ಲೆವಲ್ ಗಳನ್ನು ದಾಟಿ ಫೈನಲ್ ಪ್ರವೇಶಿಸಿದ್ದು,  ಶನಿವಾರ ಸಂಜೆ 5 ಗಂಟೆ ಸುಮಾರಿಗೆ, ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ನೆರೆಮನೆಯ ವ್ಯಕ್ತಿಯೊಬ್ಬ ಸಂಪೂರ್ಣವಾಗಿ ನೋಡಿದ್ದಾನೆ. ಟೆರೇಸ್ ಮೇಲೆ ನಡೆದು ಬಂದ ಬಾಲಕ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. 
ಈ ಸಂಬಂಧ ಪ್ರತಿಕ್ರಿಯಿಸಿರುವ ಮುಂಬಯಿ ಪೊಲೀಸ್ ಕಮಿಷನರ್ ಎನ್ ಡಿ ರೆಡ್ಡಿ  ಪ್ರತ್ಯಕ್ಷ ಸಾಕ್ಷಿಯ ಹೇಳಿಕೆ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ, ಬಾಲಕನ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಏನಿದು ಬ್ಲೂ ವೇಲ್ ಗೇಮ್?
ರಷ್ಯಾ ಮೂಲದ ಈ ಬ್ಲೂವೇಲ್ ಗೇಮ್ ಆಟಗಾರನಿಗೆ ಸರಣಿ ಪ್ರಕಾರ 50 ಟಾಸ್ಕ್ ಗಳನ್ನು ನೀಡುತ್ತದೆ. ಆಟ ಮುಕ್ತಾಯಗೊಳ್ಳುವ ಹಂತದಲ್ಲಿ  ಕಟ್ಟಡದ ಟೆರೇಸ್ ಮೇಲಿಂದ ಜಂಪ್ ಮಾಡುವಂತೆ ಹೇಳಲಾಗುತ್ತದೆ. ಜೊತೆಗೆ ಪ್ರತಿ ಚಾಲೆಂಜ್ ಪೂರ್ಣಗೊಳಿಸುವ ವಿಡಿಯೋವನ್ನು ಕಳುಹಿಸಬೇಕಾಗುತ್ತದೆ.
ಈ ಟಾಸ್ಕ್ ಗಳಲ್ಲಿ ಹಾರರ್ ಸಿನಿಮಾ ನೋಡುವುದು, ಅವೇಳೆಯಲ್ಲಿ ಎದ್ದು ವಾಕ್ ಮಾಡುವುದು, ಹಾಗೂ ತನಗೆ ತಾನೇ ನೋವುಂಟು ಮಾಡಿಕೊಳ್ಳುವುದು ಸೇರಿರುತ್ತದೆ. ಜಗತ್ತಿನಾದ್ಯಂತ ಹಲವು ವಯಸ್ಕರು ಈ ಗೇಮ್ ಗೆ ಬಲಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಭಾರತದಲ್ಲಿ ಮುಂಬಯಿ ಬಾಲಕನ ಆತ್ಮಹತ್ಯೆ ಮೊದಲ ಬಲಿಯಾಗಿದೆ. 
SCROLL FOR NEXT