ಅನಂತ್ ನಾಗ್(ಜಮ್ಮು-ಕಾಶ್ಮೀರ): ಭಯೋತ್ಪಾದಕರ ಗುಂಪು ಇಂದು ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಅರ್ವಾನಿ ಬಿಜ್ಬೆಹಾರದಲ್ಲಿ ಬ್ಯಾಂಕೊಂದನ್ನು ಲೂಟಿ ಮಾಡಿ 5 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.
ಜುಲೈ 11ರಂದು ಶೋಪಿಯಾನ್ ಪೊಲೀಸರು, ಜಮ್ಮು-ಕಾಶ್ಮೀರದ ಇಮಾಮ್ ಸಾಹಬ್ ಪ್ರದೇಶದಲ್ಲಿ ಬ್ಯಾಂಕ್ ನ್ನು ದರೋಡೆ ನಡೆಸಲು ಮತ್ತು ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇದಕ್ಕೂ ಮುನ್ನ ಜೂನ್ 7ರಂದು ಪಲ್ವಾಮಾ ಜಿಲ್ಲೆಯ ವಾನ್ ಪೊರಾ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಬ್ಯಾಂಕ್ ನ್ನು ದರೋಡೆ ಮಾಡಲು ಯತ್ನಿಸಿದ್ದಾಗ ಭದ್ರತಾ ಪಡೆ ಬಂಧಿಸಿತ್ತು.