ಕೊಯಂಬತ್ತೂರು: ಬಿಗ್ ಬಾಸ್ ತಮಿಳು ರಿಯಾಲಿಟಿ ಶೋನಲ್ಲಿ ನಿರ್ದಿಷ್ಟ ಸಮುದಾಯವನ್ನು ಅವಹೇಳನ ಮಾಡಲಾಗಿದ್ದು, ಅದಕ್ಕಾಗಿ 100 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪುತಿಯ ತೃಣಗಂ ಪಕ್ಷದ ಸ್ಥಾಪಕ ಕೆ. ಕೃಷ್ಣಸಾಮಿ ತಮ್ಮ ವಕೀಲರ ಮೂಲಕ ಕಾರ್ಯಕ್ರಮದ ನಿರೂಪಕ ನಟ ಕಮಲ್ ಹಾಸನ್, ನಟಿ ಗಾಯತ್ರಿ ರಘುರಾಮ್ ಮತ್ತು ಟಿವಿ ವಾಹಿನಿಗೆ ನೊಟೀಸ್ ಕಳುಹಿಸಿದ್ದಾರೆ.
ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನ ಎಂದು ಸಹ ಸ್ಪರ್ಧಿಯನ್ನು ಅವಹೇಳನ ಮಾಡಿದ ಬಿಗ್ ಬಾಸ್ ತಮಿಳಿನ ಸ್ಪರ್ಧಿ ಗಾಯತ್ರಿ ರಘುರಾಮ್ ಕ್ಷಮೆ ಕೇಳುವಂತೆ ನಾನು ಈಗಾಗಲೇ ಮನವಿ ಮಾಡಿದ್ದೇನೆ. ಆಕೆ ಬಳಸಿದ ಶಬ್ದ ನಿರ್ದಿಷ್ಟ ಸಮುದಾಯದವರಿಗೆ ನೋವುಂಟು ಮಾಡಿದ್ದು, ಅದನ್ನು ಚಾನೆಲ್ ಎಡಿಟ್ ಮಾಡಿ ಪ್ರಸಾರ ಮಾಡುವಾಗ ಚಾನೆಲ್ ಎಡಿಟ್ ಮಾಡಬೇಕಿತ್ತು ಎಂದು ಕೃಷ್ಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ನಾನು ಮನವಿ ಮಾಡಿ 2 ವಾರ ಕಳೆದ ನಂತರವೂ ಚಾನೆಲ್ ಆಗಲಿ, ಕಮಲ್ ಹಾಸನ್ ಅವರಾಗಲಿ ಅಥವಾ ನಟಿ ಗಾಯತ್ರಿಯಾಗಲಿ ಕ್ಷಮೆ ಕೇಳಲಿಲ್ಲ. ವಕೀಲರು ಕಳುಹಿಸಿರುವ ನೊಟೀಸ್ ಗೆ ಇನ್ನು ವಾರದೊಳಗೆ ಉತ್ತರಿಸದಿದ್ದರೆ ಅವರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.