ಸಾಂದರ್ಭಿಕ ಚಿತ್ರ 
ದೇಶ

ಭಾರತದಲ್ಲಿ ಪ್ರತಿನಿತ್ಯ ಆನೆ, ಹುಲಿಗೆ ಒಬ್ಬ ವ್ಯಕ್ತಿ ಬಲಿ!

ಆನೆ ಮತ್ತು ಹುಲಿಗಳು ಪ್ರತಿದಿನ ಭಾರತದಲ್ಲಿ ವ್ಯಕ್ತಿಯನ್ನು ಕೊಲ್ಲುತ್ತಿವೆ ಎಂದು ಸರ್ಕಾರದ ಹೊಸ ಅಂಕಿ ಅಂಶಗಳು

ನವದೆಹಲಿ: ಅಳಿವಿನಂಚಿನಲ್ಲಿರುವ ಆನೆ ಮತ್ತು ಹುಲಿಗಳು ಪ್ರತಿದಿನ ಭಾರತದಲ್ಲಿ ವ್ಯಕ್ತಿಯನ್ನು ಕೊಲ್ಲುತ್ತಿವೆ ಎಂದು ಸರ್ಕಾರದ ಹೊಸ ಅಂಕಿ ಅಂಶಗಳು ತಿಳಿಸಿವೆ.
ಮಾನವ ಮತ್ತು ಪ್ರಾಣಿ ಸಂಘರ್ಷದಲ್ಲಿ ಮನುಷ್ಯ ಚಿರತೆಗಳನ್ನು ಕೊಲ್ಲುತ್ತಿದ್ದಾನೆ. ಇತ್ತೀಚೆಗೆ ಭಾರತದಲ್ಲಿ ಅರಣ್ಯ ಪ್ರದೇಶ ನಾಶವಾಗುತ್ತಿದ್ದು, ಪ್ರಾಣಿಗಳ ವಾಸಸ್ಥಾನವನ್ನು ಮಾನವ ಅತಿಕ್ರಮ ಮಾಡುತ್ತಿದ್ದಾನೆ.
ಪರಿಸರ ಸಚಿವಾಲಯದ ಪ್ರಕಾರ, 2014ರ ಏಪ್ರಿಲ್ ತಿಂಗಳಿಂದ ಈ ವರ್ಷದ ಮೇ ವರೆಗೂ ಭಾರತಾದ್ಯಂತ 1,143 ದಿನಗಳಲ್ಲಿ 1,144 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 435 ಹುಲಿಗಳು ಹಾಗೂ 84 ಆನೆಗಳು ಕೊಲ್ಲಲ್ಪಟ್ಟಿವೆ. ಇವೆಲ್ಲಾ ಭೇಟೆಗಾರರಿಗೆ ಬಲಿಯಾಗಿವೆ, ದಂತಕ್ಕಾಗಿ ಆನೆಗಳು ಬಲಿಯಾಗುತ್ತಿವೆ.
ಪ್ರಾಣಿಗಳ ವಾಸಸ್ಥಾನವನ್ನು ಮನುಷ್ಯ ಆಕ್ರಮಿಸಿಕೊಳ್ಳುತ್ತಿರುವುದು, ಸಾವಿಗೆ ಕಾರಣವಾಗಿದೆ ಎಂದು ಅರಣ್ಯ ಇಲಾಖೆ ನಿರ್ದೇಶಕ ಸಿದ್ದಾಂತ ದಾಸ್ ಹೇಳಿದ್ದಾರೆ. ನಾವು ಈ ಬಗ್ಗೆ ಅರಿವು ಮೂಡಿಸಲು  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 
ಕಳೆದ ವಾರ ಸಂಸತ್ತಿನಲ್ಲಿ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ 1,052 ಮನುಷ್ಯರು ಹಾಗೂ 92 ಹುಲಿಗಳು ಕೊಲ್ಲಲ್ಪಟ್ಟಿವೆ. 
ಪಶ್ಚಿಮ ಬಂಗಾಳದಲ್ಲಿ  ನಾಲ್ಕನೇ ಒಂದು ಭಾಗದಷ್ಟು, ಪೂರ್ವ ರಾಜ್ಯಗಳಲ್ಲಿ 800 ಆನೆಗಳು ಪ್ರಸಿದ್ಧ ಬಂಗಾಳ ಹುಲಿಗಳು ವಾಸಿಸುತ್ತಿವೆ.
ಕಳೆದ ವರ್ಷ ಆನೆಗಳು ಪಶ್ಚಿಮ ಬಂಗಾಳದಲ್ಲಿ 1 ಗಂಟೆ ಕಾಲ ಪುಂಡಾಟ ನಡೆಸಿದ್ದವು, ಐವರನ್ನು ಕೊಂದು ಹಲವಾರು ಮನೆ ಹಾಗೂ ವಾಹನಗಳನ್ನು ನಾಶ ಪಡಿಸಿದ್ದವು. 
ಆದರೆ ದೇಶದ್ಯಾಂತಆನೆಗಳ ಹಾವಳಿ ಇದೆ, ಕಳೆದ ಜೂನ್ ನಲ್ಲಿ ತಮಿಳುನಾಡಿನಲ್ಲಿ 12 ವರ್ಷದ ಬಾಲಕಿ ಸೇರಿದಂತೆ ನಾಲ್ಕು ಮಂದಿಯನ್ನು ಆನೆಗಳು ಬಲಿತೆಗೆದುಕೊಂಡಿದ್ದವು.
ರಾಷ್ಟ್ರೀಯ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ಅಂಕಿಅಂಶಗಳ ಪ್ರಕಾರ,  2015 ರಲ್ಲಿ ಪ್ರಾಣಿಗಳ ದಾಳಿಗೆ  950 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ  ಸುಮಾರು 30 ಸಾವಿರ ಆನೆಗಳಿವೆ, 2,226 ಹುಲಿಗಳು  ಮೀಸಲು ಪ್ರದೇಶದಲ್ಲಿವೆ ಎಂದು 2014ರ ಮಾಹಿತಿ ತಿಳಿಸುತ್ತದೆ. 
2015ರ ಗಣತಿಯ ಪ್ರಕಾರ 12ರಿಂದ 14 ಸಾವಿರ ಚಿರತೆಗಳಿವೆ, ಜನವರಿ 2014ರ ಜನವರಿಯಿಂದ 1,436 ಪ್ರಾಣಿಗಳು ಕೊಲ್ಲಲ್ಪಟ್ಟಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT