ಸೀತಾರಾಮ್ ಯೆಚೂರಿ 
ದೇಶ

ಸಬ್ಸಿಡಿ ಸಿಲಿಂಡರ್ ದರ ಏರಿಕೆ ಖಂಡಿಸಿದ ಸಿಪಿ(ಐ)

ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ದರವನ್ನು 4 ರೂ. ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ ನೀಡಿರುವುದನ್ನು ಸಿಪಿ(ಐ)ಎಂ ತೀವ್ರವಾಗಿ ಖಂಡಿಸಿದೆ.

ನವದೆಹಲಿ: ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ದರವನ್ನು 4 ರೂ. ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ ನೀಡಿರುವುದನ್ನು ಸಿಪಿ(ಐ)ಎಂ ತೀವ್ರವಾಗಿ ಖಂಡಿಸಿದೆ. 
ಎಎನ್ಐ ನೊಂದಿಗೆ ಮಾತನಾಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಬ್ಸಿಡಿ ರಹಿತವಾಗಿ ಸಿಲಿಂಡರ್ ಖರೀದಿಸಲು ಸಾಧ್ಯವಿರುವವರು ಸಬ್ಸಿಡಿಯನ್ನು ಬಿಟ್ಟುಕೊಡುವಂತೆ, ಆ ಮೂಲಕ ಬಡವರಿಗೆ ಸಬ್ಸಿಡಿ ಸಿಲಿಂಡರ್ ಸಿಗುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ವೇಳೆ ಅವರ ಪಕ್ಷದವರು ಕರೆ ನೀಡುತ್ತಿದ್ದರು. ಈಗ ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ದರವನ್ನೂ ಏರಿಕೆ ಮಾಡಿದೆ. ಇದರಿಂದಾಗಿ ಬಡವರೂ ಸಹ ಸಬ್ಸಿಡಿ ರಹಿತ ಸಿಲಿಂಡರ್ ನಷ್ಟೆ ಹಣ ಕೊಟ್ಟು ಸಿಲಿಂಡರ್ ನ್ನು ಖರೀದಿಸಬೇಕಾದ ಸ್ಥಿತಿ ಉಂತಾಗುತ್ತದೆ, ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಸಿಪಿ(ಐ)ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆಗ್ರಹಿಸಿದ್ದಾರೆ. 
2018 ರ ಮಾರ್ಚ್ ವೇಳೆಗೆ ಎಲ್ ಪಿಜಿ ಸಿಲಿಂಡರ್ ಗಳ ಸಬ್ಸಿಡಿಯನ್ನು ತೆಗೆದುಹಾಕುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ದರವನ್ನು 4 ರೂ. ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆದೇಶ ನೀಡಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!