ರಸ್ತೆಯಲ್ಲಿ ಹಾಲು ಸುರಿದು ರೈತರ ಆಕ್ರೋಶ
ಶಿರಡಿ: ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ರೈತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ 23ನೇ ದಿನಕ್ಕೆ ಕಾಲಿಟ್ಟಿದೆ.ಶುಕ್ರವಾರ ರೈತರು ಹಾಲನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಶಿರಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರೈತರು ರಸ್ತೆಗೆ ಹಾಲನ್ನು ಸುರಿದು ಪ್ರತಿಭಟಿಸಿದ್ದಾರೆ. ಕೆಲವೆಡೆ ನಡೆದ ಘರ್ಷಣೆಗಳಿಂದಾಗಿ ನಿಷೇದಾಜ್ಞೆ ಜಾರಿಗೊಳಿಸಿದ್ದು, ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಸಾಲಮನ್ನಾ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ನಿನ್ನೆ ಕೂಡ ರೈತರು ಎರಡು ಟ್ಯಾಂಕ್ ಹಾಲನ್ನು ರಸ್ತೆಗೆ ಸುರಿದಿದ್ದರು.
ಇನ್ನು ಸತಾರಾದಲ್ಲೂ ಸಹ ಹಾಲು ಸಾಗಿಸುತ್ತಿದ್ದ ಟ್ಯಾಂಕರ್‌ನ್ನು ತಡೆಹಿಡಿಯಲಾಗಿದೆ. ತರಕಾರಿ ಹಾಗೂ ಪೊಲೀಸರ ವಾಹನಗಳ ಮೇಲೆ ಕಲ್ಲುತೂರಾಟ ನಡೆದಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಿನ್ನೆರಾತ್ರಿಯಿಂದಲೇ ಕೃಷಿ ಸರಕು ಸಾಗಾಣಿಕೆ ನಿರ್ಬಂಧಿಸಲಾಗಿದೆ. ಎಪಿಎಂಸಿ, ಇತರ ಮಾರುಕಟ್ಟೆಗಳು ವ್ಯಾಪಾರಿಗಳು, ರೈತರಿಲ್ಲದೆ ಬಿಕೋ ಎನ್ನುತ್ತಿವೆ.ದಿನ ಬಳಕೆ ವಸ್ತುಗಳಾದ ಹಾಲು, ತರಕಾರಿ, ಹಣ್ಣುಗಳು ಸರಿಯಾಗಿ ದೊರೆಯುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics