ಗಣೇಶ್ ಕುಮಾರ್ 
ದೇಶ

ಚಿಟ್ ಫಂಡ್ ಹಗರಣದಲ್ಲಿ ಬಿಹಾರ ಪಿಯು ಟಾಪರ್ ಹೆಸರು!

ಬಿಹಾರ ಪಿಯು ಟಾಪರ್ ಗಣೇಶ್ ಕುಮಾರ್ ಹೆಸರು ಈಗ ಚಿಟ್ ಫಂಡ್ ಹಗರಣದಲ್ಲಿಯೂ ಕೇಳಿಬಂದಿದೆ.

ಪಾಟ್ನಾ: ಬಿಹಾರ ಪಿಯು ಟಾಪರ್ ಗಣೇಶ್ ಕುಮಾರ್ ಹೆಸರು ಈಗ ಚಿಟ್ ಫಂಡ್ ಹಗರಣದಲ್ಲಿಯೂ ಕೇಳಿಬಂದಿದೆ. 
ದ್ವಿತೀಯ ಪಿಯು ಪರೀಕ್ಷೆಗೆ ತಪ್ಪು ಜನ್ಮದಿನಾಂಕವನ್ನು ನೀಡಿ ಸಿಕ್ಕಿಬಿದ್ದಿದ್ದ 42 ವರ್ಷದ ಗಣೇಶ್ ಕುಮಾರ್ ಗೆ ಇಬ್ಬರು ಮಕ್ಕಳೂ ಇದ್ದರೆಂದು ಆತನ ಹಿಂದಿನ ದಾಖಲೆಗಳನ್ನು ಪರಿಶೀಲನೆ ನಡೆಸಿದ ನಂತರ ತಿಳಿದುಬಂದಿದೆ. ಈ ಬೆನ್ನಲ್ಲೇ ಪಿಯು ಟಾಪರ್ ಆಗಿರುವ ಗಣೇಶ್ ಕುಮಾರ್ ಜಾರ್ಖಂಡ್ ನಲ್ಲಿ ನಡೆದಿರುವ 15 ಲಕ್ಷದ ವಂಚನೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾನೆ ಎಂದು ಪಾಟ್ನಾ ಎಸ್ಎಸ್ ಪಿ ಹೇಳಿದ್ದಾರೆ. 
ಪಾಟ್ನಾ ಎಸ್ಎಸ್ ಪಿ ಮನು ಮಹಾರಾಜ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಲಾ ವಿಭಾಗದಲ್ಲಿ ಕೋಲ್ಕತಾದ ಚಿಟ್ ಫಂಡ್ ಕಂಪನಿಯ 15 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಜಾರ್ಖಂಡ್ ನ ಲ್ಲಿ ಚಿಟ್ ಫಂಡ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಗೆ ಜನರು ತಮ್ಮ ಹಣವನ್ನು ವಾಪಸ್ ನೀಡುವಂತೆ ಒತ್ತಡ ಹೇರುತ್ತಿದ್ದ ಹಿನ್ನೆಲೆಯಲ್ಲಿ 2013 ರಲ್ಲಿ ಪಾಟ್ನಾದಿಂದ ತಪ್ಪಿಸಿಕೊಂಡಿದ್ದ. ಇದಾದ ಬಳಿಕ ಸರ್ಕಾರಿ ಕೆಲಸ ಪಡೆಯಲು ಯತ್ನಿಸಿದ್ದ ಗಣೇಶ್ ತನ್ನ ವಯಸ್ಸನ್ನು 18 ವರ್ಷದಷ್ಟು ಕಡಿಮೆ ನಮೂದಿಸಿದ್ದ ಎಂದು ಎಸ್ಎಸ್ ಪಿ ತಿಳಿಸಿದ್ದಾರೆ. 
ಹಣದುರುಪಯೋಗಪಡಿಸಿಕೊಂಡ ನಂತರ ಪಾಟ್ನಾದ ಜನರ ಸಹಾಯದಿಂದ ಈತ ತನ್ನ ವಯಸ್ಸನ್ನು 18 ವರ್ಷದಷ್ಟು ಕಡಿಮೆ ನಮೂದಿಸಿ ಮತ್ತೊಮ್ಮೆ 10, ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಈ ವರ್ಷದ ದ್ವಿತೀಯ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಎಂದು ಎಸ್ಎಸ್ ಪಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ