ನವದೆಹಲಿ: ಜಮ್ಮು-ಕಾಶ್ಮಿರದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ನಡೆದಿರುವ ಎನ್ಐಎ ದಾಳಿ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಮಾತನಾಡಿದ್ದು, ರಾಷ್ಟ್ರೀಯ ಭದ್ರತೆ ವಿಚಾರವಾಗಿ ಸೇನಾ ಕಾರ್ಯಾಚರಣೆ ಹಾಗೂ ಎನ್ಐಎ ಕಾರ್ಯಾಚರಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕಾಶ್ಮೀರದ ಜನತೆ ಪ್ರತ್ಯೇಕತಾವಾದಿಗಳು ಉಂಟು ಮಾಡಿರುವ ಸಮಸ್ಯೆಯಿಂದ ಹೊರಬರಲು ಯತ್ನಿಸುತ್ತಿದ್ದಾರೆ. ರಾಜ್ಯ ಅಭಿವೃದ್ಧಿಯಾಗುವ ಅವಕಾಶವನ್ನು ಬಿಟ್ಟುಕೊಡುವುದಕ್ಕೆ ರಾಜ್ಯದ ಜನತೆ ಸಿದ್ಧರಿಲ್ಲ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.