ದೇಶ

ರಂಜಾನ್ ಎಫೆಕ್ಟ್: ಲಕ್ನೋದಲ್ಲಿ 600 ಮಾಂಸದಂಗಡಿ ರಿ-ಓಪನ್

Shilpa D
ಲಕ್ನೋ:  ರಂಜಾನ್ ಪ್ರಯಕ್ತವಾಗಿ ಲಕ್ನೋದಲ್ಲಿ ಪರವಾನಗಿ ಇಲ್ಲದ 600 ಮಾಂಸದಂಗಡಿ ಮತ್ತೆ ಕಾರ್ಯಾರಂಭ ಮಾಡಿವೆ. ಆದರೆ ಆಡಳಿತಾಂಗ ಕೂಡ ಇದನ್ನು ವಿರೋಧಿಸುವಲ್ಲಿ ಮೃಧು ಧೋರಣೆ ತಳದಿದೆ.
ಮತ್ತೆ ಆರಂಭವಾಗಿರುವ ಮಾಂಸದಂಗಡಿಗಳು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಸಮರ್ಥರಾಗಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತಿಳಿಸಿದೆ. ಈ ಮಾಂಸದಂಗಡಿಗಳು ಕಸಾಯಿಖಾನೆಗಳನ್ನು ಹೊಂದಿಲ್ಲ, ಹೀಗಾಗಿ ಅವರು ಪರವಾನಗಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಅಂಗಡಿ ಮಾಲೀಕರು ತಾವು ಮಾರಾಟ ಮಾಡುವ ಮಾಂಸದ ಮೂಲವನ್ನು ನಮೂದಿಸಬೇಕಾಗಿದೆ, ಏಕೆಂದರೆ ಅಂಗಡಿಗಳಲ್ಲಿ ಪ್ರಾಣಿಗಳನ್ನು ವಧಿಸಲು ಅನುಮತಿ ನೀಡಲಾಗುವುದಿಲ್ಲ. ಜೊತೆಗೆ ನಗರವು ಕಾನೂನುಬದ್ಧ ಕಸಾಯಿಖಾನೆ ಹೊಂದಿಲ್ಲ, ಹೀಗಾಗಿ ಅಂಗಡಿ ಮಾಲೀಕರು ಲೈಸೆನ್ಸ್ ಗೆ ಅರ್ಜಿ ಹಾಕುವುದಿಲ್ಲ ಎಂದು ಹೇಳಿದ್ದಾರೆ,
SCROLL FOR NEXT