ಸೇನಾ ವಾಹನದ ಮೇಲೆ ನಕ್ಸಲರ ದಾಳಿ: ಓರ್ವ ಯೋಧ ಹುತಾತ್ಮ, 6 ಗಾಯ 
ದೇಶ

ಸೇನಾ ವಾಹನದ ಮೇಲೆ ನಕ್ಸಲರ ದಾಳಿ: ಓರ್ವ ಯೋಧ ಹುತಾತ್ಮ, 6 ಗಾಯ

ಸೇನಾ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ 6 ಯೋಧರಿಗೆ ಗಾಯವಾಗಿರುವ ಘಟನೆ ಒಡಿಶಾದ ಕಂದಾಮಾಲ್ ಜಿಲ್ಲೆಯಲ್ಲಿ...

ಬರ್ಹಾಂಪುರ್: ಸೇನಾ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ 6 ಯೋಧರಿಗೆ ಗಾಯವಾಗಿರುವ ಘಟನೆ ಒಡಿಶಾದ ಕಂದಾಮಾಲ್ ಜಿಲ್ಲೆಯಲ್ಲಿ ನಡೆದಿದೆ. 
ವಿಶೇಷ ಕಾರ್ಯಾಚರಣಾ ಪಡೆ (ಎಸ್ಒಜಿ) ಪಡೆ ಭಾನುವಾರ ಕಾರ್ಯಾಚರಣೆ ಮುಗಿಸಿ ವಾಹನದಲ್ಲಿ ಹಿಂತಿರುಗುತ್ತಿತ್ತು. ಈ ವೇಳೆ ವಾಹನದ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 
ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಬರ್ಹಾಂಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುತಾತ್ಮನಾದ ಯೋಧರನ್ನು ಲಕ್ಷ್ಮೀಕಾಂತ್ ಜಾನಿ ಎಂದು ಹೇಳಲಾಗುತ್ತಿದೆ. 
ನಕ್ಸಲರಿಗಾಗಿ ಸೇನಾಪಡೆ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
300ಕ್ಕೂ ಹೆಚ್ಚು ಸುತ್ತುಗಳ ಗುಂಡುಗಳನ್ನು ನಕ್ಸಲರು ಹಾರಿಸಿದ್ದಾರೆ. ಅಲ್ಲದೆ, ಸೇನಾ ಪಡೆ ಮೇಲೆ ಗ್ರೆನೇಡ್ ದಾಳಿಯನ್ನೂ ನಡೆಸಿದ್ದಾರೆ. ಕೊನೆಯಲ್ಲಿದ್ದ ವಾಹನದ ಮೇಲೆ ಸುಧೀರ್ಘವಾಗಿ ಗುಂಡಿನ ಮಳೆ ಸುರಿಸಿದ್ದರು. ಈ ವೇಳೆ ಜಾನಿ ಹುತಾತ್ಮನಾಗಿದ್ದಾರೆ. ಅಲ್ಲದೆ, 6 ಯೋಧರು ಗಾಯಗೊಂಡಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!