ಕಾಶ್ಮೀರ: ಕಾಶ್ಮೀರಕ್ಕೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಡಿಜಿ ರಾಜೀವ್ ರಾಯ್ ಭಟ್ನಗರ ಭೇಟಿ ನೀಡಿದ್ದು, 45 ಬೆಟಾಲಿಯನ್ ಸಿಆರ್ ಪಿಎಫ್, ಚೀತಾ 45 ಮತ್ತು 44 ಬೆಟಾಲಿಯನ್ ಪಡೆಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಮಾತುಕತೆ ವೇಳೆ ಬಂಡಿಪೋರಾ ಎನ್ ಕೌಂಟರ್ ಯಶಸ್ವಿಯಾಗಿರುವುದನ್ನು ಪ್ರಸ್ತಾಪಿಸಿರುವ ಅವರು ಸೇನಾ ಪಡೆಯ ಧೈರ್ಯವನ್ನು ಕೊಂಡಾಡಿದ್ದಾರೆ.
ನಮ್ಮ ಕ್ಯಾಂಪ್ ನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಮ್ಮ ಕಾರ್ಯಾಚರಣೆಗೆ ಸಹಾಯ ಮಾಡಿದರು. ಅಮರನಾಥ ಯಾತ್ರೆ ಮಾರ್ಗಗಳ ಭದ್ರತೆಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ರಾಯ್ ಹೇಳಿದ್ದಾರೆ.