ದೇಶ

ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಮತ್ತು ಉಮಾ ಭಾರತಿಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ

Shilpa D
ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್,ಕೆ ಆಡ್ವಾಣಿ, ಉಮಾ ಭಾರತಿ ಮತ್ತು ಮುರುಳಿ ಮನೋಹರ್ ಜೋಶಿ ಅವರುಗಳ ಖುದ್ದು ಹಾಜರಾತಿಗೆ ಸಿಬಿಐ ವಿಶೇಷ ಕೋರ್ಟ್ ವಿನಾಯಿತಿ ನೀಡಿದೆ.
ಮೇ 30 ರಂದು ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಅಡ್ವಾಣಿ, ಜೋಶಿ ಮತ್ತು ಉಮಾ ಭಾರತಿ  ಸೇರಿದಂತೆ 12 ಮಂದಿ ವಿರುದ್ಧ ಚಾರ್ಜ್ ಶೀಟ್  ಸಲ್ಲಿಸಿತ್ತು.
ಬಿಜೆಪಿಯ ವಿನಯ್ ಕಟಿಯಾರ್, ವಿಎಚ್ ಪಿ ಮುಖಂಡ ವಿಷ್ಣು ಹರಿ ದಾಲ್ಮಿಯಾ, ಮತ್ತು ಸಾದ್ವಿ ರೀತಾಂಬರ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿದೆ.
ವಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಕೋರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಈ ಹಿಂದೆ ನ್ಯಾಯಾಧೀಶರು ಹೇಳಿದ್ದರು.
ಎರಡು ವರ್ಷಗಳಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ, 2019 ರಂದು ನಡೆಯುವ ಲೋಕಸಭೆ ಚುನಾವಣೆಗೂ ಮುನ್ನ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. 
SCROLL FOR NEXT