ಮೌ (ಉತ್ತರ ಪ್ರದೇಶ): ಮದುವೆಯಲ್ಲಿ ವಿಷಾಹಾರ ಸೇವಿಸಿ 200 ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಮೌ ಜಿಲ್ಲೆ ಕೊಪಗಂಡ್ ಜಿಲ್ಲೆಯಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಮದುವೆ ಮನೆಯಲ್ಲಿ ಬಡಿಸಲಾಗಿತ್ತ ಆಹಾರ ಸೇವಿಸುತ್ತಿದ್ದಂತೆಯೇ ಹಲವರು ವಾಂತಿ ಹಾಗೂ ಹೊಟ್ಟೆ ನೋವೆಂದು ಹೇಳಲು ಆರಂಭಿಸಿದ್ದಾರೆ. ಕೂಡಲೇ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆಯಷ್ಟೇ ರಂಜಾನಾ ಪ್ರಯುಕ್ತ ಉತ್ತರಪ್ರದೇಶದ ಬಹ್ರಾಯ್ಚ್ ನಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಆಹಾರ ಸೇವಿಸಿ 175 ಮಂದಿ ಅಸ್ವಸ್ಥಗೊಂಡಿದ್ದರು.