ದೇಶ

ಭೀಕರ ದೃಶ್ಯ: ಪೋಷಕರೆದುರೆ ಮೊಸಳೆಗೆ ಆಹಾರವಾದ ಯುವತಿ

Vishwanath S
ಕಾನ್ಪುರ್: ಉತ್ತರಪ್ರದೇಶದ ಎತಾವಾ ಜಿಲ್ಲೆಯ ಚಾಕರ್ ನಗರದ ರಾಷ್ಟ್ರೀಯ ಚಂಬಲ್ ಅಭಯಾರಣ್ಯದಲ್ಲಿ ಯುವತಿಯೊಬ್ಬಳ ಮೇಲೆ ದಾಳಿ ಮಾಡಿದ ಮೊಸಳೆ ಆಕೆಯನ್ನು ನದಿಯೊಳಗೆ ಎಳೆದುಕೊಂಡು ಹೋಗಿದೆ. 
ಹಿಂದುಗಳ ಮಂಗಳಕರ ದಿನವಾದ ಏಕದಶಿಗಾಗಿ 20 ವರ್ಷದ ಯುವತಿ ಉಪವಾಸದಲ್ಲಿ ತೊಡಗಿದ್ದಳು. ಈ ಮಧ್ಯೆ ಸ್ನಾನ ಮಾಡಲೆಂದು ನದಿಯ ದಂಡೆ ಮೇಲೆ ಸ್ನಾನ ಮಾಡುತ್ತಿದ್ದಾಗ ಮೊಸಳೆಯೊಂದು ಆಕೆಯ ಮೇಲೆ ದಾಳಿ ಮಾಡಿದೆ. ಪೋಷಕರು ಕೂಗಿಕೊಳ್ಳುತ್ತಾ ಬರುವಷ್ಟರಲ್ಲಿ ಮೊಸಳೆ ಆಕೆಯನ್ನು ನದಿಯೊಳಗೆ ಎಳೆದ್ಯೊಯ್ದಿದೆ ಎಂದು ಅಭಯಾರಣ್ಯದ ಅಧಿಕಾರಿಗಳು ತಿಳಿಸಿದ್ದಾರೆ. 
ಪರಿಸರವಾದಿಗಳು ಹೇಳುವಂತೆ ಇದು ಮೊಸಳೆಗಳಿಗೆ ಮೊಟ್ಟೆ ಇಟ್ಟು ಮರಿ ಮಾಡುವ ಕಾಲವಾಗಿದೆ. ಅಂತೆ ನದಿಯ ದಂಡೆಯ ಮೇಲೆ ಮೊಸಳೆ ಮೊಟ್ಟೆ ಇಟ್ಟಿರುವ ಜಾಗದಲ್ಲಿ ಯುವತಿ ಸ್ನಾನ ಮಾಡುತ್ತಿದ್ದಳು ಎಂದು ಕಾಣುತ್ತದ್ದೆ. ಇದರಿಂದ ಆಕ್ರೋಶಗೊಂಡ ಹೆಣ್ಣು ಮೊಸಳೆ ತನ್ನ ಮೊಟ್ಟೆಯ ಗೂಡನ್ನು ಕಾಪಾಡಿಕೊಳ್ಳುವ ಸಲುವಾಗಿ ದಡಕ್ಕೆ ಬಂದು ಯುವತಿ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದಾರೆ. 
ಅಭಯಾರಣ್ಯದ ಅಧಿಕಾರಿಗಳು ಪೊಲೀಸರು ಮತ್ತು ನುರಿತ ಈಜುಗಾರರ ಸಹಾಯದೊಂದಿಗೆ ಯುವತಿಯ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ ಎಂದು ವಿಭಾಗೀಯ ಅಭಯಾರಣ್ಯಾಧಿಕಾರಿ ಅನಿಲ್ ಪಟೇಲ್ ಹೇಳಿದ್ದಾರೆ. 
ರಾಷ್ಟ್ರೀಯ ಚಂಬಲ್ ಅಭಯಾರಣ್ಯದಲ್ಲಿ ನೂರಾರು ಮೊಸಳೆಗಳು ವಾಸವಾಗಿವೆ. ಕಳೆದ ಮೊಸಳೆ ಗಣತಿಯಲ್ಲಿ 500 ಮೊಸಳೆಗಳು ಇವೆ ಎಂದು ತಿಳಿದುಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 
SCROLL FOR NEXT