ಲಂಡನ್: ಕೆಲವು ದಿನಗಳ ಹಿಂದೆ ನಡೆದ ಲಂಡನ್ ಬ್ರಿಡ್ಜ್ ದಾಳಿಯ ಪಾಕ್ ಮೂಲದ ಉಗ್ರ ಖುರಾಮ್ ಭಟ್ ಬಗ್ಗೆ ದಿನ ಕಳೆದಂತೆ ಅಚ್ಚರಿಯ ಮಾಹಿತಿಗಳು ಬಹಿರಂಗವಾಗತೊಡಗಿದೆ. ಇತ್ತೀಚೆಗೆ ಬಹಿರಂಗವಾದ ಮಾಹಿತಿಯ ಪ್ರಕಾರ, ಪಾಕ್ ಮೂಲದ ಬ್ರಿಟನ್ ಉಗ್ರ ಖುರಾಮ್ ಭಟ್ ಬ್ರಿಟನ್ ನ ವಿಂಬಲ್ಡನ್ ಭದ್ರತಾ ಸಂಸ್ಥೆಯಲ್ಲಿ ನೌಕರಿ ಪಡೆಯಲು ಯತ್ನಿಸಿದ್ದ ಎಂಬ ವಿಷಯ ತಿಳಿದುಬಂದಿದೆ.
ವಿಂಬಲ್ಡನ್ ಭದ್ರತಾ ಸಂಸ್ಥೆ ವಿಂಬಲ್ಡನ್ ಹಾಗೂ ಇತರ ಕ್ರೀಡಾ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ಸಂಸ್ಥೆಯಾಗಿದ್ದು, ಉಗ್ರ ಈ ಸಂಸ್ಥೆಯಲ್ಲಿ ನೌಕರಿ ಪಡೆಯಲು ಯತ್ನಿಸಿದ್ದ ಮಾಹಿತಿ ಬಹಿರಂಗವಾದ ನಂತರ ಆತ ಟೆನ್ನಿಸ್ ಟೂರ್ನಮೆಂಟ್ ನ್ನು ಗುರಿಯಾಗಿರಿಸಿಕೊಂಡಿದ್ದ ಸಾಧ್ಯತೆಗಳಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಜಾಡನ್ನು ಹಿಡಿದು ಬ್ರಿಟನ್ ಭದ್ರತಾ ಸಿಬ್ಬಂದಿಗಳು ಹಾಗೂ ಭಯೋತ್ಪಾದನೆ ನಿಗ್ರಹ ದಳದ ಸಿಬ್ಬಂದಿಗಳು ಉಗ್ರ ಖುರಾಮ್ ಭಟ್ ಕುರಿತು ತನಿಖೆ ನಡೆಸುತ್ತಿದ್ದಾರೆ.