ದೇಶ

ಮುಂಚಿತವಾಗಿಯೇ ಇ-ಪ್ರವೇಶ ಪತ್ರ ಡೌನ್ ಲೋಡ್ ಮಾಡಿ: ಅಭ್ಯರ್ಥಿಗಳಿಗೆ ಯುಪಿಎಸ್ ಸಿ

Lingaraj Badiger
ನವದೆಹಲಿ: ಜೂನ್ 18ರಂದು ನಡೆಯಲಿರುವ 2017ನೇ ಸಾಲಿನ ಪ್ರಿಲಿಮನರಿ ಪರೀಕ್ಷೆಯ ಇ-ಪ್ರವೇಶ ಪತ್ರವನ್ನು ಆದಷ್ಟು ಬೇಗ ಡೌನ್ ಮಾಡಿಕೊಳ್ಳುವ ಮೂಲಕ ಕೊನೆ ಗಳಿಯ ಆತುರವನ್ನು ತಪ್ಪಿಸುವಂತೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಮಂಗಳವಾರ ಅಭ್ಯರ್ಥಿಗಳಿಗೆ ಸೂಚಿಸಿದೆ.
ಕಳೆದ ಕೆಲವು ವರ್ಷಗಳಿಂದ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು ಅಭ್ಯರ್ಥಿಗಳ ವಿಳಾಸಕ್ಕೆ ಕಳುಹಿಸುವುದನ್ನು ನಿಲ್ಲಿಸಿದ್ದು, ಈಗ ಆನ್ ಲೈನ್ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.
ಕೊನೆ ಗಳಿಗೆಯ ಆತುರವನ್ನು ತಪ್ಪಿಸುವುದಕ್ಕಾಗಿ ಅಭ್ಯರ್ಥಿಗಳು ಆದಷ್ಟು ಬೇಗ ತಮ್ಮ ಇ-ಪ್ರವೇಶ ಪತ್ರ ಮತ್ತು ಪ್ರಮುಖ ಸೂಚನೆಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಯುಪಿಎಸ್ ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ ನಡೆಯಲಿರುವ ಯುಪಿಎಸ್ ಸಿ ಪರೀಕ್ಷೆಗೆ ಅಭ್ಯರ್ಥಿಗಳು www.upsconline.nic.in.ನಿಂದ ತಮ್ಮ ಇ-ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಐಎಎಸ್, ಐಪಿಎಸ್ ಸೇರಿದಂತೆ ಒಟ್ಟು 20 ವಿಭಾಗಗಳ 980 ಹುದ್ದೆಗಳಿಗೆ ಯುಪಿಎಸ್ ಸಿ ಭಾನುವಾರ ಪರೀಕ್ಷೆ ನಡೆಸುತ್ತಿದೆ.
SCROLL FOR NEXT