ನವದೆಹಲಿ: ಜುಲೈ 1 ರಿಂದ ಜಿಎಸ್ ಟಿ ಜಾರಿಗೆ ಬರಲಿದ್ದು, ವಿಳಂಬ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜಿಎಸ್ ಟಿ ಜಾರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಕೈಗಾರಿಕಾ ಕಲಯದ ಕೆಲವು ವಲಯಗಳಿಂದ ಜಿಎಸ್ ಟಿ ಜಾರಿಯನ್ನು ತಡ ಮಾಡುವಂತೆ ಬೇಡಿಕೆ ಇತ್ತು. ಜಿಎಸ್ ಟಿ ಕಾಯ್ದೆ ಜಾರಿಯನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡಬೇಕೆಂದು ಪಶ್ಚಿಮ ಬಂಗಾಳ ಹಣಕಾಸು ಸಚಿವರಾದ ಅಮಿತ್ ಮಿತ್ರ ಸಹ ಮನವಿ ಮಾಡಿದ್ದರು. ಆದರೆ ಈಗಾಗಲೇ ನಿರ್ಧರಿಸಿರುವಂತೆ ಜುಲೈ.1 ಕ್ಕೆ ಜಿಎಸ್ ಟಿ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಜಿಎಸ್ ಟಿ ಮಸೂದೆ ಜಾರಿಗೆ ಸಿದ್ಧತೆಗಳು ಭರದಿಂದ ಸಾಗಿದೆ. ಅರುಣ್ ಜೇಟ್ಲಿ ನೇತೃತ್ವದ ಸಮಿತಿ ಈಗಾಗಲೇ ಜಿಎಸ್ ಟಿ ಕಾಯ್ದೆಯ ಅಡಿಯಲ್ಲಿ ತೆರಿಗೆ ದರಗಳನ್ನು ನಿರ್ಧರಿಸಿವೆ.