ದೇಶ

ಅಂತಾರಾಷ್ಟ್ರೀಯ ಸಾಗರ ನ್ಯಾಯಾಧೀಕರಣದ ಮೊದಲ ಮಹಿಳಾ ಸದಸ್ಯೆಯಾಗಿ ನೀರೂ ಚಾಧಾ ಆಯ್ಕೆ

Sumana Upadhyaya
ನವದೆಹಲಿ: ಸಾಗರ ಕಾನೂನು ಅಂತಾರಾಷ್ಟ್ರೀಯ ನ್ಯಾಯಮಂಡಳಿಯ(ಐಟಿಎಲ್ಒಎಸ್) ಸದಸ್ಯೆಯಾಗಿ ನೀರೂ ಚಾಧಾ ಆಯ್ಕೆಗೊಂಡಿದ್ದಾರೆ. ಸಮುದ್ರಗಳ ಅಂತರರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ಣಯಿಸುವ ಉನ್ನತ ಮಟ್ಟದ ಸಂಸ್ಥೆ ಇದಾಗಿದೆ.
ಐಟಿಎಲ್ಒಎಸ್ ವೇದಿಕೆಯಲ್ಲಿ ಭಾರತೀಯ ಪರಿಣಿತೆ. ಏಷ್ಯಾ ಫೆಸಿಫಿಕ್ ಗುಂಪಿನಲ್ಲಿ  ಅತಿ ಹೆಚ್ಚು ಮತ ನೀರು ಚಾದಾರಿಗೆ ಸಿಕ್ಕಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಗೋಪಾಲ್ ಬಗ್ಲೆ ಟ್ವೀಟ್ ಮಾಡಿದ್ದಾರೆ.
ನ್ಯಾಯಮಂಡಳಿಯ ಸದಸ್ಯ ಹುದ್ದೆಗೆ ನಿನ್ನೆ ಮತದಾನ ನಡೆದಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಕಾನೂನು ಸಲಹೆಗಾರ ಹುದ್ದೆಯನ್ನು  ವಿಶ್ವಸಂಸ್ಥೆಯಲ್ಲಿ ವಿಜಯ ಲಕ್ಷಿ ಪಂಡಿತ್ ಅವರ ನಂತರ ವಹಿಸಿಕೊಳ್ಳುತ್ತಿರುವ ಮೊದಲ ಮಹಿಳೆ ನೀರೂ ಚಾಧಾರಾಗಿದ್ದಾರೆ.
SCROLL FOR NEXT