ದೇಶ

ಶಾಂಘೈ ಸಭೆ: ಭಾರತದ ಕೆಂಪು ಕೋಟೆ ತೋರಿಸಿ ತನ್ನ ಇತಿಹಾಸ ಹೇಳಿದ ಪಾಕಿಸ್ತಾನ!

Srinivas Rao BV
ಅಸ್ತಾನಾ: ಕಝಕ್‌ಸ್ಥಾನ ರಾಜಧಾನಿ ಅಸ್ತಾನಾದಲ್ಲಿ ಕೆಲವು ದಿನಗಳ ಹಿಂದೆ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಭಾರತದ ಕೆಂಪು ಕೋಟೆಯ ಚಿತ್ರವನ್ನು ತೋರಿಸಿ ತನ್ನ ಇತಿಹಾಸವನ್ನು ವರ್ಣಿಸಿದೆ. 
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ರಾಷ್ಟ್ರಗಳು ತಮ್ಮ ರಾಷ್ಟ್ರಗಳ ಇತಿಹಾಸದ ಬಗೆಗಿನ ವಿಶೇಷವಾದ ಅಂಶಗಳನ್ನು ಪ್ರದರ್ಶಿಸಿದವು. ಈ ಕಾರ್ಯಕ್ರಮದಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಮೊಘಲ್ ದೊರೆ ಷಹ ಜಹಾನ್ ನ ಪರಂಪರೆಯ ಹಕ್ಕನ್ನು ಪ್ರತಿಪಾದಿಸಿದ್ದು, ದೆಹಲಿಯಲ್ಲಿ ತ್ರಿವರ್ಣಧ್ವಜವಿರುವ ಕೆಂಪುಕೋಟೆಯನ್ನು ತೋರಿಸಿ ಪಾಕಿಸ್ತಾನ ತನ್ನ ಇತಿಹಾಸವನ್ನು ವರ್ಣಿಸಿದೆ. ಅಷ್ಟೇ ಅಲ್ಲದೇ ಅದು ಲಾಹೋರ್ನಲ್ಲಿ ಶಲಾಮಾರ್ ಗಾರ್ಡನ್ಸ್ ನ ಕೋಟೆ ಎಂದೂ ಪಾಕಿಸ್ತಾನ ಹೇಳಿರುವುದಾಗಿ ವರದಿ ಪ್ರಕಟವಾಗಿದೆ. "ಇವೆಲ್ಲವೂ ಷಹ ಜಹಾನ್ ಆಡಳಿತಾವಧಿಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಮೊಘಲ್ ನಾಗರಿಕತೆಯ ಮಾಸ್ಟರ್ ಪೀಸ್ ಗಳು ಎಂದು ಹೇಳಿದೆ. 
ಇನ್ನು ಸಭೆಯಲ್ಲಿ ಭಾಗಿಯಾಗಿದ್ದ ಕಝಕ್‌ಸ್ಥಾನ ತೈಮೂರ್ (ತಮೆರ್ಲೇನ್) ಮೊಘಲ್ ಪರಂಪರೆಯ ಪೂರ್ವಜ ಎಂದು ತನ್ನ ಇತಿಹಾಸವನ್ನು ನೆನಪಿಸಿಕೊಂಡಿದೆ. ಭಾರತ ತಾಜ್ ಮಹಲ್ ಹಾಗೂ ಕೆಂಪುಕೋಟೆಯನ್ನು ತೋರಿಸಿ ಮೊಘಲ್ ಕಾಲಘಟ್ಟದಲ್ಲಿ ನಿರ್ಮಾಣವಾದ ವಿಶ್ವದ ಪಾರಂಪರಿಕ ಕಟ್ಟಗಳೆಂದು ಹೇಳಿದೆ. 
SCROLL FOR NEXT