ದೇಶ

ಶಾಂಘೈ ಸಹಕಾರ ಒಕ್ಕೂಟ ಸಾರ್ವಭೌಮತೆಯನ್ನು ನಿರ್ಲಕ್ಷಿಸಬಾರದು: ಭಾರತದ ರಾಯಭಾರಿ

Srinivas Rao BV
ನವದೆಹಲಿ: ಶಾಂಘೈ ಸಹಕಾರ ಒಕ್ಕೂಟ ಸದಸ್ಯ ರಾಷ್ಟ್ರಗಳ ಸಾರ್ವಭೌಮತೆಯನ್ನು ನಿರ್ಲಕ್ಷಿಸಬಾರದು ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಜಯ್ ಗೋಖಲೆ ಹೇಳಿದ್ದಾರೆ. 
ವ್ಯಾಪಾರ ಮತ್ತು ಸಂಪರ್ಕ ವಲಯದಲ್ಲಿ ಸಹಕಾರವನ್ನು ವೃದ್ಧಿಸುವುದರ ಜೊತೆಗೆ ಚೀನಾ ಎಸ್ ಸಿಒ ಸದಸ್ಯ ರಾಷ್ಟ್ರಗಳ ಸಾರ್ವಭೌಮತೆಯನ್ನೂ ಗೌರವಿಸಬೇಕಾಗುತ್ತದೆ ಎಂದು ವಿಜಯ್ ಗೋಖಲೆ ತಿಳಿಸಿದ್ದಾರೆ. ಬೀಜಿಂಗ್ ನಲ್ಲಿ ಶಾಂಘೈ ಸಹಕಾರ ಒಕ್ಕೂಟ ಕೇಂದ್ರ ಕಚೇರಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಭಾರತೀಯ ರಾಯಭಾರಿ ವಿಜಯ್ ಗೋಖಲೆ, ಸ್ಪಷ್ಟವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಹಾದುಹೋಗುವ ಸಿಪಿಇಸಿ ಯೋಜನೆ ಬಗ್ಗೆ ಉಲ್ಲೇಖಿಸಿದ್ದು, ಸದಸ್ಯ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತೆಯನ್ನು ಚೀನಾ ಗೌರವಿಸಬೇಕು ಎಂದು ಹೇಳಿದ್ದಾರೆ. 
ಪಾಕಿಸ್ತಾನ-ಚೀನಾ ಎಕಾನಾಮಿಕ್ ಕಾರಿಡಾರ್ ನ್ನು ಭಾರತ ಹಾಗೂ ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯ ತೀವ್ರವಾಗಿ ವಿರೋಧಿಸುತ್ತಿವೆ.
SCROLL FOR NEXT