ದೇಶ

ಪಶ್ಚಿಮ ಬಂಗಾಳದಿಂದ ಪರಾರಿಯಾಗಿರುವ ಜಸ್ಟೀಸ್ ಕರ್ಣನ್: ಹುಡುಕಿ ಸುಸ್ತಾದ ಪೊಲೀಸರು

Shilpa D
ಚೆನ್ನೈ: ಕಳ್ಳರು, ಅಪರಾಧಿಗಳು, ದರೋಡೆಕೋರರು, ಉಗ್ರರು ಸೇರಿದಂತೆ ಹಲವು ಬಗೆಯ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿರುವ ಆರೋಪಿಗಳನ್ನು ಹಿಡಿದು ಜೈಲಿಗಟ್ಟಿರುವ ಪೊಲೀಸರಿಗೆ ಕೊಲ್ಕೊತ್ತಾ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ್ ಕರ್ಣನ್ ಅವರನ್ನು ಪತ್ತೆ ಹಚ್ಚುವುದು ಬಹುದೊಡ್ಡ ಸವಾಲಾಗಿದೆ.
ಕಳೆದ 1 ತಿಂಗಳಿಂದ ಕರ್ಣನ್ ಅವರನ್ನು ಬಂಧಿಸಲು ಡಿಜಿ ರ್ಯಾಂಕ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಚೆನ್ನೈಗೆ ಆಗಮಿಸಿದ್ದಾರೆ.
ಮೇ 9 ರಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಕರ್ಣನ್  ಮತ್ತೆ ಪತ್ತೆಯಾಗಿಲ್ಲ. ಅದರ ಮಾರನೇ ದಿನ ಐದು ಮಂದಿ ಪೊಲೀಸರ ತಂಡ ಚೆಪೌಕ್ ಗೆ ತೆರಳಿ ಕರ್ಣನ್ ಅವರನ್ನು ಬಂಧಿಸಲು ಪ್ರಯತ್ನಿಸಿದ್ದರು, ಆದರೆ ಪೊಲೀಸರ ತಂಡ ಅಲ್ಲಿಗೆ ತಲುಪುವ ವೇಳೆದೆ ಕರ್ಣನ್, ಬೇರೊಂದು ವಾಹನದಲ್ಲಿ ಅಲ್ಲಿಂದ ತೆರಳಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪೊಲೀಸರಿಗೆ ಕರ್ಣನ್ ಎಲ್ಲಿಯೂ ಪತ್ತೆಯಾಗಿಲ್ಲ. 
ಕರ್ಣನ್ ಅವರನ್ನು ಪತ್ತೆ ಹಚ್ಚಲು ದಕ್ಷಿಣ ಭಾರತದ  ಪ್ರದೇಶಗಳಲ್ಲಿ ಪರಿಶೀಲಿಸಿದ್ದೇವೆ. ತಮಿಳುನಾಡು, ಆಂಧ್ರ ಪ್ರದೇಶ,. ಪುದುಚೆರಿ ಸೇರಿದಂತೆ ಹಲವು  ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆವು.
ನೆಲ್ಲೂರಿನ ಟಾಟಾ ದಲ್ಲಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಂತರ ಅಲ್ಲಿ ಹುಡುಕಲು ಹೋಗುವ ಮುಂಚೆ  ಅಲ್ಲಿಂದ ಹೊರಟಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
SCROLL FOR NEXT