ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪೂರ್ವ ದೆಹಲಿಯಲ್ಲಿ ಗ್ಯಾಂಗ್ ಸ್ಟರ್ ಅಬು ಸಲೇಂ ಆಪ್ತನ ಬಂಧನ

ಕೊಲೆ, ಕೊಲೆ ಯತ್ನ, ಸ್ಫೋಟ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ ಸ್ಟರ್ ಅಬು ಸಲೇಂ ಶಂಕಿತ ....

ಸಾಂದರ್ಭಿಕ ಚಿತ್ರ
Lingaraj Badiger
Updated On : 16 Jun 2017, 4:32 am
ನವದೆಹಲಿ: ಕೊಲೆ, ಕೊಲೆ ಯತ್ನ, ಸ್ಫೋಟ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ ಸ್ಟರ್ ಅಬು ಸಲೇಂ ಶಂಕಿತ ಆಪ್ತನನ್ನು ಪೂರ್ವ ದೆಹಲಿಯಲ್ಲಿ ಬಂಧಿಸಿರುವುದಾಗಿ ಶುಕ್ರವಾರ ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಮತ್ತು ಮುಂಬೈ ಪೊಲೀಸರಿಗೆ ಬೇಕಾಗಿದ್ದ ಅಬು ಸಲೇಂ ಆಪ್ತ ಜಾನ್ ಉಸ್ಮಾನ್ ಖಾನ್ ಅಲಿಯಾಸ್ ರೀನುನನ್ನು ನಿನ್ನೆ ತಡ ರಾತ್ರಿ ಸಂಜಯ್ ಜೀಲ್ ಸಮೀಪ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
30 ವರ್ಷದ ಖಾನ್ ಜೂನ್ 3ರಂದು ಜನಕಪುರಿಯಲ್ಲಿ ತನ್ನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದು, ಈ ಮುಂಚೆ ಬಾಲಿವುಡ್ ನಟಿ ರವೀನಾ ಟಂಡನ್ ಅವರ ಪತಿ ಅನಿಲ್ ತದನಿ ಅವರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದರು.

Advertisement

Advertisement

ಅಬು ಸಲೇಂ ಆಪ್ತ ಜಾನ್ ಉಸ್ಮಾನ್ ಖಾನ್ ನನ್ನು ಬಂಧಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ(ದೆಹಲಿ ಪೂರ್ವ) ಒಮಿವಿರ್ ಸಿಂಗ್ ಅವರು ತಿಳಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೇ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟಿಸಿದ ಟಾಟಾ ಕೋರ್ಟ್, ಅಬು ಸಲೇಂ ಸೇರಿದಂತೆ ಸ್ಫೋಟಕ್ಕೆ ಸಂಚು ರೂಪಿಸಿ, ಸ್ಫೋಟ ನಡೆಸಿದ್ದ ಮುಸ್ತಾಫಾ ದೋಸಾ, ಆತನ ಸಹೋದರ ಮೊಹಮ್ಮದ್ ದೋಸಾ, ತಾಹಿರ್ ಮರ್ಚೆಂಟ್ ಸೇರಿದಂತೆ 6 ಆರೋಪಿಗಳನ್ನು ತಪ್ಪಿತಸ್ಥರು ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement