ಆತ್ಮಸ್ಥಾನಂದ ಮಹಾರಾಜರೊಂದಿಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) 
ದೇಶ

ಪ್ರಧಾನಿ ಮೋದಿ ಬದುಕಿನ ಪಥ ಬದಲಿಸಿದ್ದ ಗುರು ಆತ್ಮಸ್ಥಾನಂದ ಮಹಾರಾಜ್ ಭಗವಂತನಲ್ಲಿ ಲೀನ

ಪ್ರಧಾನಿ ನರೇಂದ್ರ ಮೋದಿ ಅವರ ಬದುಕಿನ ಪಥ ಬದಲಿಸಿದ್ದ ಗುರು ರಾಮಕೃಷ್ಣಾಶ್ರಮದ ಆತ್ಮಸ್ಥಾನಂದ ಮಹಾರಾಜ್(97) ಜೂ.18 ರಂದು ವಿಧಿವಶರಾಗಿದ್ದಾರೆ.

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರ ಬದುಕಿನ ಪಥ ಬದಲಿಸಿದ್ದ ಗುರು ರಾಮಕೃಷ್ಣಾಶ್ರಮದ ಆತ್ಮಸ್ಥಾನಂದ ಮಹಾರಾಜ್(97) ಜೂ.18 ರಂದು ವಿಧಿವಶರಾಗಿದ್ದಾರೆ. 
ವಯೋ ಸಹಜ ಸಮಸ್ಯೆಯನ್ನು ಎದುರಿಸುತ್ತಿದ್ದ ಆತ್ಮಸ್ಥಾನಂದ ಮಹಾರಾಜ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಗುರು ಎಂದು ಪರಿಗಣಿಸಿದ್ದರು. ಅನಾರೋಗ್ಯಕ್ಕೀಡಾಗಿದ್ದ ಸ್ವಾಮಿ ಆತ್ಮಸ್ಥಾನಂದ ಮಹಾರಾಜ್ ಅವರನ್ನು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹಲವು ಬಾರಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. 
ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಪ್ರವೇಶಿಸುವುದಕ್ಕೂ ಮುನ್ನ ರಾಮಕೃಷ್ಣಾಶ್ರಮದಲ್ಲಿ ಸನ್ಯಾಸಿಯಾಗಲು ಬಯಸಿದ್ದರು. ಆದರೆ ಬಾಲಕ ಮೋದಿ ಕೋರಿಕೆಯನ್ನು ಅಂದು ತಿರಸ್ಕರಿಸಿದ್ದ ಆತ್ಮಸ್ಥಾನಂದ ಸ್ವಾಮೀಜಿ, ಮೋದಿ ಸನ್ಯಾಸತ್ವ ತಡೆದು ದೇಶ ಸೇವೆ ಮಾಡುವಂತೆ ಸಲಹೆ ನೀಡಿದ್ದರು. 
ಗುರುವಿನ ಅಗಲಿಕೆಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಆತ್ಮಸ್ಥಾನಂದ ಮಹಾರಾಜರು ಇಹಲೋಕ ತ್ಯಜಿಸಿರುವುದು ವೈಯಕ್ತಿಕವಾಗಿ ನನಗೆ ನಷ್ಟ ಉಂಟು ಮಾಡಿದೆ. ನನ್ನ ಜೀವನದ ಮುಖ್ಯವಾದ ಕಾಲಘಟ್ಟದಲ್ಲಿ ಅವರ ಸಾನ್ನಿಧ್ಯ ದೊರೆತಿತ್ತು. ಕೋಲ್ಕತ್ತಾಗೆ ಭೇಟಿ ನೀಡಿದಾಗಲೆಲ್ಲಾ ಅವರ ಆಶೀರ್ವಾದ ಪಡೆಯುತ್ತಿದ್ದೆ. ಅವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆ ಸ್ಮರಿಸಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT