ದೇಶ

ಉ.ಪ್ರ: ಊಟದಲ್ಲಿ ಗೋ ಮಾಂಸ ನೀಡಲು ನಿರಾಕರಿಸಿದ್ದಕ್ಕೆ ಮದುವೆ ರದ್ದು

Sumana Upadhyaya
ರಾಂಪುರ್(ಉತ್ತರ ಪ್ರದೇಶ): ಮದುವೆ ಸಮಾರಂಭದಲ್ಲಿ ಊಟಕ್ಕೆ ಗೋ ಮಾಂಸ ಬಡಿಸಬೇಕೆಂದು ವರನ ಕಡೆಯವರು ಬೇಡಿಕೆಯಿಟ್ಟಿದ್ದಕ್ಕೆ ವಧುವಿನ ಕುಟುಂಬ ಮದುವೆ ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ರಾಂಪುರ್ ನಲ್ಲಿ ನಡೆದಿದೆ.
ಬೊಟ್ ಪೊಲೀಸ್ ಠಾಣಾ ವ್ಯಾಪ್ತಿಯ ದರಿಯಗರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ವೇಳೆ ಮದುವೆಯಲ್ಲಿ ಅತಿಥಿಗಳಿಗೆ ಊಟಕ್ಕೆ ಗೋಮಾಂಸ ಬಡಿಸದಿದ್ದರೆ ಮದುವೆ ರದ್ದುಪಡಿಸಿ ಎಂದೇ ವರನ ಕಡೆಯವರು ಷರತ್ತು ಹಾಕಿದ್ದರು. ಗೋ ಮಾಂಸ ಪೂರೈಸಬೇಕೆಂಬುದು ಮಾತ್ರವಲ್ಲದೆ ವರನ ಕಡೆಯವರು ವರದಕ್ಷಿಣೆಗೆ ಸಹ ಬೇಡಿಕೆಯಿಟ್ಟಿದ್ದರು.
''ವರನ ಕಡೆಯವರು ಮದುವೆಯಲ್ಲಿ ಗೋ ಮಾಂಸ ಬಡಿಸಬೇಕೆಂದು ಮತ್ತು ಕಾರು ನೀಡಬೇಕೆಂದು ಬೇಡಿಕೆಯಿಟ್ಟರು. ನಾವು ಎರಡು ಬೇಡಿಕೆಗಳಿಗೂ ಒಪ್ಪದಿದ್ದಾಗ ಅವರು ಮದುವೆ ರದ್ದುಪಡಿಸಿದರು. ಸರ್ಕಾರ ಗೋ ಮಾಂಸ ನಿಷೇಧಿಸಿದೆ. ಹೀಗಿರುವಾಗ ನಾವು ಹೇಗೆ ಮದುವೆಗೆ ಗೋ ಮಾಂಸ ಪೂರೈಸಲಿ? ಎಂದು ವಧುವಿನ ತಾಯಿ ಕೇಳುತ್ತಾರೆ.                                   
SCROLL FOR NEXT