ನವದೆಹಲಿ: ಜುಲೈ 1ರಿಂದ ಸರಕುಗಳು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಬರಲಿದ್ದು ಜಿಎಸ್‌ಟಿ ಪ್ರಚಾರದ ರಾಯಭಾರಿಯಾಗಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ರನ್ನು ಆಯ್ಕೆ ಮಾಡಲಾಗಿದೆ.
ಜಿಎಸ್‌ಟಿ ಪ್ರಚಾರಕ್ಕಾಗಿ 40 ಸೆಕೆಂಡ್ ಗಳ ವಿಡಿಯೋವೊಂದನ್ನು ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಅಂಡ್ ಕಸ್ಟಮ್ ಚಿತ್ರೀಕರಿಸಿದ್ದು ಅದರಲ್ಲಿ ಅಮಿತಾಬ್ ಬಚ್ಚನ್ ಅವರು ನಟಿಸಿದ್ದಾರೆ.
ಒಂದು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ರಚಿಸಲು ಒಂದು ಉಪಕ್ರಮ ಎಂದು ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ ಈ ವಿಡಿಯೋವನ್ನು ಲಗತ್ತಿಸಿದೆ.
ಇದಕ್ಕೂ ಮುನ್ನ ಜಿಎಸ್‌ಟಿಗೆ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ರಾಯಭಾರಿಯಾಗಿದ್ದರು.