ಸಾಂದರ್ಭಿಕ ಚಿತ್ರ 
ದೇಶ

ಪುಣೆ: ಭ್ರಷ್ಟಾಚಾರ ಆರೋಪದ ಮೇಲೆ ಸೇನಾ ಕರ್ನಲ್ ಸೇರಿ ನಾಲ್ವರ ಬಂಧನ

50 ಸಾವಿರ ರುಪಾಯಿ ಲಂಚ ಪಡೆದ ಆರೋಪದ ಮೇಲೆ ಭಾರತೀಯ ಸೇನೆಯ ಕರ್ನಲ್ ಹಾಗೂ ಇತರೆ ಮೂವರನ್ನು ಸೋಮವಾರ....

ಪುಣೆ: 50 ಸಾವಿರ ರುಪಾಯಿ ಲಂಚ ಪಡೆದ ಆರೋಪದ ಮೇಲೆ ಭಾರತೀಯ ಸೇನೆಯ ಕರ್ನಲ್ ಹಾಗೂ ಇತರೆ ಮೂವರನ್ನು ಸೋಮವಾರ ಸಿಬಿಐ ಅಧಿಕಾರಿಗಳು ಪುಣೆಯಲ್ಲಿ ಬಂಧಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೇನಾ ಕರ್ನಲ್ ಹಾಗೂ ಇತರೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಳಿಕ ಕೋರ್ಟ್ ಗೆ ಹಾಜರುಪಡಿಸುತ್ತಿದೆ.
ಸೇನೆಯ ವಿವಿಧ ಸ್ಥಳಗಳಲ್ಲಿ ಬಳಸಲ್ಪಡುವ ಬಂಡೆ ಹೊಡೆಯುವ ಯಂತ್ರ ಖರೀದಿ ಸಂಬಂಧ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ನಿರ್ದೇಶಕರಿಂದ 1.80 ಲಕ್ಷ ರುಪಾಯಿ ಲಂಚಕ್ಕೆ ಕರ್ನಲ್ ಬೇಡಿಕೆಯಿಟ್ಟಿದ್ದರು. 
ಕಳೆದ ಫೆಬ್ರವರಿಯಲ್ಲಿ 50 ಸಾವಿರ ರುಪಾಯಿ ಮುಂಗಡವಾಗಿ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Nationwide strike: 'ಕಾರ್ಮಿಕ ನೀತಿ' ವಿರೋಧಿಸಿ ದೇಶಾದ್ಯಂತ ಮುಷ್ಕರ: 30 ಕೋಟಿ ಕಾರ್ಮಿಕರು ಭಾಗಿ, ಬ್ಯಾಂಕಿಂಗ್, ವಿದ್ಯುತ್ ಸೇವೆ ವ್ಯತ್ಯಯ!

'ಲೋಕಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಹೊಂದುವ ಜವಾಬ್ದಾರಿಯುತ ವ್ಯಕ್ತಿ ದೇಶದಲ್ಲಿಲ್ಲದಿರುವುದು ದುರದೃಷ್ಟಕರ'

ಸ್ಪೀಕರ್ ಕೊಠಡಿಯಲ್ಲಿ ಕಾಂಗ್ರೆಸ್ ಸಂಸದರಿಂದ ಓಂ ಬಿರ್ಲಾ ಗೆ ನಿಂದನೆ, ಪ್ರಿಯಾಂಕಾ ಸಂಸದರನ್ನು ತಡೆಯಲಿಲ್ಲ- ರಿಜಿಜು

Thai school shooting: ಶಾಲೆ ಮೇಲೆ ಗುಂಡಿನ ಮಳೆ, 22 ಮಕ್ಕಳು ಸೇರಿ ಕನಿಷ್ಟ 34 ಸಾವು, ದಾಳಿಕೋರ ಪೊಲೀಸ್ ವಶಕ್ಕೆ!

ನರವಾಣೆ ಪುಸ್ತಕ ವಿವಾದ: 'ನಂಬರ್ ಒನ್' ಶಂಕಿತ, ಪೆಂಗ್ವಿನ್ ಪಬ್ಲಿಕೇಷನ್ಸ್‌ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಪೊಲೀಸರು!

SCROLL FOR NEXT